ಉಡುಪಿ: ರಾಜ್ಯಾದ್ಯಂತ ಅಕ್ಟೋಬರ್ 1 ಕ್ಕೆ ಥಿಯೇಟರ್ ಗಳು ಓಪನ್ ಆಗಲಿವೆ.ಆದರೆ ಉಡುಪಿಯಲ್ಲಿ ಒಂದು ವಾರ ಚಿತ್ರ ಪ್ರದರ್ಶನ ಮುಂದಕ್ಕೆ ಹೋಗಲಿದೆ.ಹೀಗಾಗಿ ಅ. 8ರ ನಂತರವೇ ಉಡುಪಿಯಲ್ಲಿ ಚಿತ್ರ ಪ್ರದರ್ಶನ ಶುರುವಾಗಲಿದೆ.ಇದಕ್ಕೆ ಕಾರಣ ಪಿತೃಪಕ್ಷ! ಹೌದು..ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡದೇ ಇರಲು ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.
ಒಂದು ವಾರದ ನಂತರ ಎಲ್ಲಾ ಚಿತ್ರಮಂದಿರಳು ಓಪನ್ ಆಗಲಿವೆ ಎಂದು ಕಲ್ಪನ ಚಿತ್ರಮಂದಿರದ ಮ್ಯಾನೇಜರ್ ವಿ.ಎಸ್ ಹೊಳ್ಳ ಮಾಹಿತಿ ನೀಡಿದ್ದಾರೆ. ನವರಾತ್ರಿ ಶುಭದಿನದಲ್ಲಿ ಉಡುಪಿಯ ಥಿಯೇಟರ್ ಗಳು ಓಪನ್ ಆಗಲಿದ್ದು ಸಿನಿಪ್ರಿಯರು ಇನ್ನೂ ಒಂದು ವಾರ ಕಾಯಬೇಕಿದೆ.
Kshetra Samachara
30/09/2021 04:06 pm