ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ಕೆ 6 ವರ್ಷ: ಕಸ ಆಯ್ದ ನಟ ಅರುಣ್ ಸಾಗರ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪಹರೆ ಸಂಘಟನೆಯು ಕಳೆದ ಆರು ವರ್ಷಗಳಿಂದ ಪ್ರತಿ ಶನಿವಾರ ಮುಂಜಾನೆ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಇದು ಇವತ್ತಿಗೆ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರವಾರದ ಕಾಳಿ ನದಿ ಮತ್ತು ಅರಬ್ಬೀ ಸಮುದ್ರ ಸಂಗಮ ಅಂಚಿನ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಈ ಕಾರ್ಯಕ್ರಮದಲ್ಲಿ ನಟ, ನಿರ್ಮಾಪಕ ಅರುಣ್ ಸಾಗರ್ ಕೂಡ ಭಾಗವಹಿಸಿದರು. ಕಾಳಿ ಸಂಗಮದ ಕಡಲತೀರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು. ಬಳಿಕ ನೂರಾರು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಇದೇ ವೇಳೆ ಅರುಣ್ ಸಾಗರ್ ಕೂಡ ಪಾಲ್ಗೊಂಡು ತೀರದ ತ್ಯಾಜ್ಯಗಳನ್ನು ಆಯ್ದರು. ಬೆಳಿಗ್ಗೆ 7:15ರಿಂದ ಆರಂಭವಾದ ಈ ಕಾರ್ಯ ಸತತ ಮೂರು ಗಂಟೆ ನಡೆದು, ಒಂದು ಲಾರಿಯಷ್ಟು ತ್ಯಾಜ್ಯ ಸಂಗ್ರಹ ಮಾಡಲಾಯಿತು. ಈ ತ್ಯಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಕವರ್‌ಗಳು, ಬಿಯರ್ ಬಾಟಲ್‌ಗಳಿದ್ದವು. ಕಾರ್ಯಕರ್ತರಿಗೆ ಗ್ಲೌಸ್, ಸ್ವಚ್ಛತಾ ಪರಿಕರ, ಸ್ಯಾನಿಟೈಸರ್ ಗಳನ್ನು ವಿವರಿಸಲಾಗಿತ್ತು.

ಈ ವೇಳೆ ಪಹರೆಯ ಕಾರ್ಯ ಶ್ಲಾಘಿಸಿದ ಅರುಣ್ ಸಾಗರ್, ಟ್ಯಾಗೋರ್ ನಡೆದಾಡಿದಂಥ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ಸಂತೋಷವೆನಿಸಿತು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತ್ಯಾಜ್ಯಗಳನ್ನು ಹಾಗೆಯೇ ಎಸೆದು ಹೋಗುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

Edited By : Vijay Kumar
Kshetra Samachara

Kshetra Samachara

23/01/2021 06:28 pm

Cinque Terre

8.03 K

Cinque Terre

1

ಸಂಬಂಧಿತ ಸುದ್ದಿ