ಮಂಗಳೂರು: ತುಳುನಾಡಿನಲ್ಲಿ ದಸರಾ ಸಂದರ್ಭದಲ್ಲಿ ಹುಲಿವೇಷದ ಕುಣಿತದ ಅಬ್ಬರ ಎಲ್ಲೆಲ್ಲೂ ಕಂಡು ಬರುತ್ತದೆ. ಈ ಬಾರಿ ಹುಲಿವೇಷದಲ್ಲಿ 'ಯುವರತ್ನ' ಪುನೀತ್ ರಾಜ್‍ಕುಮಾರ್ ಗೋಚರವಾಗಿದ್ದಾರೆ.
ಇತ್ತೀಚೆಗೆ ಅಗಲಿದ ನಟನ ನೆನಪಿಗಾಗಿ ಮಂಗಳೂರಿನ ಹೆಸರಾಂತ ಹುಲಿವೇಷ ತಂಡ ಶಿವ ಫ್ರೆಂಡ್ಸ್ ಬಳಗದ ಹುಲಿವೇಷಧಾರಿಯ ಹೊಟ್ಟೆಯಲ್ಲಿ ಅಪ್ಪು ಚಿತ್ರವನ್ನು ಬರೆಯಲಾಗಿದೆ. ಚಿತ್ರದ ಕೆಳಗೆ ಕರ್ನಾಟಕ ಯುವರತ್ನ ಎಂದು ಬರೆಯಲಾಗಿದೆ. ಇದೀಗ ಈ ಹುಲಿವೇಷಧಾರಿಯ ಫೋಟೊ ವೈರಲ್ ಆಗಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
PublicNext
05/10/2022 04:21 pm