ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಇಲ್ಲಿಗೆ ಕಾಲಿಟ್ಟರೆ ಸಾಕು ಬಾಯಲ್ಲಿ ನೀರೂರಿಸುವ ತರಹೆವಾರಿ ಚಾಕಲೇಟ್, ಕೇಕ್ ಗಳು ನಮ್ಮನ್ನು ಎದುರುಗೊಳುತ್ತದೆ. ಒಂದಕ್ಕಿಂತ ಒಂದು ಭಿನ್ನವಾದರೆ, ರುಚಿಯಲ್ಲೂ ಅಷ್ಟೆ ಒಂದರ ರುಚಿಗಿಂತ ಮತ್ತೊಂದರ ರುಚಿ ಆಹಾ….
ಇಂತಹದ್ದೊಂದು ದೃಶ್ಯ ಕಂಡು ಬಂದಿರೋದು ನಗರದ ಫೋರಂ ಫಿಜ್ಜಾ ಮಾಲ್ ನಲ್ಲಿ. ನಿಟ್ಟೆ ಕಾಲೇಜು ವತಿಯಿಂದ 'ನಿಕೊ ಚಾಕಲೇಟ್ ಸ್ಟ್ರೀಟ್' 2 ದಿನಗಳ ಚಾಕಲೇಟ್ ಹಬ್ಬ ಆಯೋಜನೆಗೊಂಡಿದೆ.
ಇಲ್ಲಿ ಭಿನ್ನ ಭಿನ್ನವಾಗಿರುವ ಚಾಕಲೇಟ್ ಗಳು, ಕೇಕ್ ಗಳು ಲಭ್ಯವಿದೆ. ಅದರಲ್ಲೂ ದೇಸಿ ಚಾಕಲೇಟ್ ನಿಂದ ತೊಡಗಿ ವಿದೇಶಿ ಚಾಕಲೇಟ್ ಗಳೂ ಇಲ್ಲಿವೆ. ಅದರಲ್ಲೂ ಕಣ್ಮನ ಸೆಳೆಯುವ,ಬಾಯಲ್ಲಿ ನೀರೂರಿಸುವ ಚಾಕಲೇಟ್ ಗಳು ಇಲ್ಲಿ ಲಭ್ಯವಿದೆ.
ಪುತ್ತೂರಿನ ಸ್ವದೇಶಿ ಚಾಕಲೇಟ್ ನಿಂದ ಹಿಡಿದು ಫ್ರಾನ್ಸ್, ಯುಕೆಯ ವಿದೇಶಿ ಚಾಕಲೇಟ್ ಗಳೂ ಇಲ್ಲಿ ದೊರೆಯುತ್ತದೆ. ಅದರಲ್ಲೂ ಕೈಗೆಟುಕುವ ದರದಲ್ಲಿ ಚಾಕಲೇಟ್ ಗಳು ಲಭ್ಯವಿದ್ದು, ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳೇ ಆಯೋಜಿಸಿರುವ ಈ ಚಾಕಲೇಟ್ ಮೇಳದಲ್ಲಿ ಮನೆಯಲ್ಲಿಯೇ ಹೆಂಗಳೆಯರು, ವಿದ್ಯಾರ್ಥಿಗಳೇ ತಯಾರಿಸಿರುವ ತರೆಹವಾರಿ ಚಾಕಲೇಟ್ ಗಳು, ಬಿಸ್ಕತ್ತು, ಕೇಕ್ ಗಳು ದೊರೆಯುತ್ತದೆ.
ಅಲ್ಲದೆ ಚಾಕಲೇಟ್, ಕೇಕ್ ತಯಾರಿಕೆಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡಿರುವ ಸಾಫ್ಟವೇರ್ ಉದ್ಯೋಗಿಗಳು ಈ ಮೇಳದ ಮಳಿಗೆಯಲ್ಲಿರುವುದು ಮತ್ತೊಂದು ವಿಶೇಷವಾಗಿದೆ.
ಒಟ್ಟಿನಲ್ಲಿ ಮಂಗಳೂರು ನಗರದ ಚಾಕಲೇಟ್ ಪ್ರಿಯರಿಗೆ ವಿಶಿಷ್ಟ ಚಾಕಲೇಟ್ ಸ್ವಾದವನ್ನು ಅನುಭವಿಸುವ ಅವಕಾಶ ದೊರಕಿದ್ದು ಸ್ವೀಟ್ ಪ್ರಿಯರು ಖುಷ್ ಆಗಿದ್ದಾರೆ.
Kshetra Samachara
22/05/2022 10:58 am