ಉಡುಪಿಯಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ಕ್ಷಣಕ್ಕೊಮ್ಮೆ ಆಗುವ ಧಾರಾಕಾರ ಮಳೆಯಿಂದಾಗಿ ಮೀನುಗಾರಿಕೆಗೂ ತೊಂದರೆಯಾಗಿದೆ.ಗಾಳಿ-ಮಳೆಯಿಂದ ಪ್ರಕ್ಷುಬ್ಧಗೊಂಡಿರುವ ಸಮುದ್ರ ಸಹಜ ಸ್ಥಿತಿಗೆ ಬಂದಿಲ್ಲದ ಕಾರಣ ಯಾವುದೇ ಬೋಟುಗಳು ಸಮುದ್ರಕ್ಕೆ ಇಳಿದಿಲ್ಲ.
ಕಾರವಾರ ಬಂದರಿನಲ್ಲಿ ತಂಗಿದ್ದ ಕೆಲವೊಂದು ಬೋಟುಗಳು ಮೀನುಗರಿಕೆಗೆ ತೆರಳಿದ್ದರೂ ನೀರಿಗೆ ಬಲೆ ಹಾಕಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸಾಗಿವೆ. ಸಮುದ್ರದ ಅಡಿಭಾಗದಲ್ಲಿ ನೀರಿನ ಒತ್ತಡದಿಂದಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗರಾರು ತಿಳಿಸಿದ್ದಾರೆ. ನಾಳೆ ಸಮುದ್ರ ಸಹಜ ಸ್ಥಿತಿಗೆ ಬಂದಲ್ಲಿ ಬಹುತೇಕ ಬೋಟುಗಳು ಮೀನುಗಾರಿಕೆಗೆ ತೆರಳಲಿವೆ.
ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಗಾಳಿಯಿಂದಾಗಿ ನೀರಿನ ಒತ್ತಡವೂ ಹೆಚ್ಚಾಗಿದೆ. ಮಲ್ಪೆ ಬಂದರಿನಲ್ಲಿ ಶೇ. 70ರಷ್ಟು ಬೋಟ್ ಗಳು ಲಂಗರು ಹಾಕಿವೆ. ಬಹುತೇಕ ಬೋಟುಗಳು ಮಂಗಳೂರು ಮತ್ತು ಕಾರವಾರ ಬಂದರು ಸೇರಿದಂತೆ ಸಮೀಪ ಬಂದರುಗಳನ್ನು ಅಶ್ರಯಿಸಿವೆ.
PublicNext
13/09/2022 05:45 pm