ಬೈಂದೂರು: ಇಂದು ಎಲ್ಲದರಲ್ಲೂ ಕಲಬೆರಕೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಮಾದರಿ ರಿಫೈನ್ಡ್ ಆಯಿಲ್ ಗಳು ಹಾಗೂ ಅಡುಗೆಗೆ ಬಳಸುವ ಖೊಬ್ಬರಿ ಎಣ್ಣೆ ಎಲ್ಲವೂ ಕಲಬೆರಕೆ, ಆರೋಗ್ಯ ಹಾನಿಕರ ಕೆಮಿಕಲ್ ಮಿಶ್ರಿತ.
ಆದರೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಶ್ರೀನಿವಾಸ್ ಗಾಣಿಗ ತಮ್ಮ "ಬೃಂದಾವನ" ಶುದ್ಧ ಕೊಬ್ಬರಿ ಉತ್ಪಾದನೆ ಎಣ್ಣೆ ಘಟಕದೊಂದಿಗೆ ಕುಲಕಸುಬನ್ನು ಪೋಷಿಸಿಕೊಂಡು ಬಂದಿದ್ದಾರೆ. ಕಟ್ಟಿಗೆ ಗಾಣದ ಎಣ್ಣೆಯೇ ಅತಿ ಪರಿಶುದ್ಧ ಎಂದು ಅವರು ಹೇಳುವುದು ನೋಡಿದರೆ, ಗ್ರಾಹಕರ ಆರೋಗ್ಯದ ಬಗ್ಗೆ ಅವರಿಗಿರುವ ಆರೋಗ್ಯದ ಕಳಕಳಿ ಮೆಚ್ಚುವಂತಹದು.
ಈ ಭಾಗದಲ್ಲಿ ಹಲವು ಎಣ್ಣೆ ಘಟಕಗಳನ್ನು ಕಾಣಬಹುದಾದರೂ, ಶುದ್ದ ನೈಸರ್ಗಿಕ ಕೊಬ್ಬರಿ ಎಣ್ಣೆ ತಯಾರಿಕೆಗೆ ಪೂರ್ಣಪ್ರಮಾಣದಲ್ಲಿ ಮರದ ಗಾಣವನ್ನು ಬಳಸುತ್ತಿರುವುದು ಶ್ರೀನಿವಾಸ್ ಗಾಣಿಗರ ಘಟಕದ ವಿಶೇಷತೆ.
ಹೆದ್ದಾರಿ 66 ರ ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಳದ ಬಳಿ ಇರುವ ಬೃಂದಾವನ".ಶುದ್ಧ ಕೊಬ್ಬರಿ ಘಟಕದ ಸಂಚಾಲಕರಾದ ನಿಸರ್ಗ ಗಾಣಿಗ ಮತ್ತು ಶ್ರೀನಿವಾಸ ಗಾಣಿಗರಿಗೆ ಇದು ಕೌಶಲ್ಯ ಸಿದ್ಧ ಉದ್ಯೋಗ. ಬೃಂದಾವನ ಎಣ್ಣೆ ಘಟಕದ ಮೂಲಕ ಯುವಪೀಳಿಗೆಗೆ ಮಾದರಿಯಾಗಿರುವ ಶ್ರೀನಿವಾಸ್ ಗಾಣಿಗರು ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ವಿವರಿಸಿದ್ದಾರೆ.
ಹೌದು ಮರದ ಗಾಣದ ಎಣ್ಣೆ ಸಂಸ್ಕರಿಸಿದ ಎಣ್ಣೆ (Refined oil) ಗಿಂತ ಹೇಗೆ ಭಿನ್ನ?
ಕಂಪನಿಗಳಲ್ಲಿ ಹೀಟ್ ಪ್ರೊಸೆಸಿಂಗ್ ದಲ್ಲಿ Refined oil ಉತ್ಪಾದನೆಯಾದರೆ, ಮರದಗಾಣದ ಕೋಲ್ಡ್ ಪ್ರೊಸೆಸಿಂಗ್ ದಲ್ಲಿ ತೈಲ ಉತ್ಪಾದನೆಯಾಗುತ್ತದೆ. ಇದೇ ಪ್ರಮುಖ ವ್ಯತ್ಯಾಸ. ಹೀಟ್ ಪ್ರೊಸೆಸಿಂಗ್ ದಲ್ಲಿ ಆರೋಗ್ಯಕ್ಕೆ ಅವಶ್ಯವಿರುವ ಪ್ರಮುಖ ಪೋಷಕಾಂಶ ತೆಗೆದು ಹಾಕಲ್ಪಟ್ಟರೆ ಮರದಗಾಣ ವಿಧಾನದಲ್ಲಿ ಯಾವುದೆ ಪೋಷಕಾಂಶ ವ್ಯಯವಾಗುವುದಿಲ್ಲ. ಇದು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ.
ಇನ್ನೊಂದು ಪ್ರಮುಖ ಆಂಶವೆಂದರೆ Refined oil ದಲ್ಲಿ ಆರೋಗ್ಯಕ್ಕೆ ಹಾನಿಕರ ಕೆಮಿಕಲ್ಸ್ ಮಿಶ್ರಣವಾಗುತ್ತದೆ. ಆದರೆ ಮರದಗಾಣದ ಎಣ್ಣೆ ಸಂಪೂರ್ಣ ಸುರಕ್ಷಿತ ಹಾಗೂ ಆರೋಗ್ಯ ಪೂರ್ಣ ಎನ್ನುತ್ತಾರೆ.
ಕೋಲ್ಡ್ ಪ್ರೆಸ್ಸಿಂಗ್(ಮರದ ಗಾಣ) ವಿಧಾನದಲ್ಲಿ, ಹೊರತೆಗೆಯಲಾದ ತೈಲವು ಅದರ ನೈಸರ್ಗಿಕ ಆಣ್ವಿಕ ಸ್ವರೂಪದಲ್ಲಿರುತ್ತದೆ. ಮರದ ಗಾಣದಿಂದ ಒತ್ತಿದ ಎಣ್ಣೆಯಲ್ಲಿ ಇಳುವರಿ ಕಡಿಮೆ ಇದ್ದರೂ, ಇದು ಬಳಕೆದಾರರಿಗೆ ಹೆಚ್ಚು ಆರೋಗ್ಯಕರವಾಗಿರುತ್ತದೆ ಎಂದು ಗಾಣಿಗ ಅವರು ತೈಲ ಉತ್ಪಾದನೆ ಚಿತ್ರಣವನ್ನು ನೀಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಶ್ರೀನಿವಾಸ್ ಗಾಣಿಗ, 9591785094 ಸಂಪರ್ಕಿಸಬಹುದು.
ವಿಶೇಷವರದಿ: ದಾಮೋದರ ಮೊಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್
PublicNext
04/05/2022 04:09 pm