ವರದಿ: ಪುನೀತ್ ಕೃಷ್ಣ
ಮುಲ್ಕಿ: ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಬಳ್ಕುಂಜೆ ಪರಿಸರದಲ್ಲಿ ಬೆಳೆದ ಕಬ್ಬು, ಗಣೇಶೋತ್ಸವ ಸಹಿತ ಮತ್ತಿತರ ಹಬ್ಬ ಹರಿದಿನಗಳು ಹತ್ತಿರ ಬರುತ್ತಿದ್ದಂತೆ ಕಟಾವಿಗೆ ಸಿದ್ಧವಾಗಿದೆ. ಬೆಳೆಗಾರರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳ್ಕುಂಜೆ, ಉಳೆಪಾಡಿ, ಕವತ್ತಾರು ಪ್ರದೇಶದ ಸುಮಾರು 25 ಎಕ್ರೆ ಪ್ರದೇಶದಲ್ಲಿ ಬೆಳೆಗಾರರು ಕಬ್ಬು ಬೆಳೆಯುತ್ತಿದ್ದು ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಬೆಳೆಗಾರರು ನಷ್ಟ ಅನುಭವಿಸಿದ್ದರು
ಈ ಸಂದರ್ಭ ಕೆಲ ಉದ್ಯಮಿಗಳು ಮಾನವೀಯ ನೆಲೆಯಲ್ಲಿ ಖರೀದಿಸಿದ್ದರು. ಈ ಬಾರಿ ಸುಮಾರು 30 ಮಂದಿ ಕಬ್ಬು ಬೆಳೆಗಾರರು ಸಂಘಟಿತರಾಗಿ ದರ ನಿಗಧಿ ಮಾಡಿದ್ದಾರೆ. ಕಬ್ಬಿಗೆ ಉತ್ತಮ ಬೆಲೆಯಿಂದ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ 10,000 ದವರೆಗೆ ಕಬ್ಬು ಬೆಳೆಯಲಾಗುತ್ತಿದ್ದು, ಒಂದು ಕಪ್ಪು ಕಬ್ಬಿಗೆ ಸುಮಾರು 24 ರೂ. ನಿಗಧಿಪಡಿಸಲಾಗಿದೆ
ಅವಿಭಾಜಿತ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಮಂಗಳೂರು, ಪುತ್ತೂರು ಉಡುಪಿ ,ಬಂಟ್ವಾಳ, ಕಡಬ, ನೆಲ್ಯಾಡಿ, ಕಾರ್ಕಳದ ಸುಮಾರು 25ಕ್ಕೂ ಹೆಚ್ಚು ಚರ್ಚ್ ಗಳಿಗೆ ಬಳ್ಕುಂಜೆ ಯಿಂದಲೇ ಕಬ್ಬು ಸರಬರಾಜಾಗುತ್ತಿದ್ದು, ಈ ಬಾರಿ ಉತ್ತಮ ಬೇಡಿಕೆ ಬಂದಿದೆ ಎನ್ನುತ್ತಾರೆ ಕಬ್ಬು ಬೆಳೆಗಾರ ಎ ಎಲಿಯಾಸ್ ಡಿಸೋಜಾ. ಹಾಗೇ ಮುಂದಿನ ದಿನಗಳಲ್ಲಿ ಬಳ್ಕುಂಜೆ ಪರಿಸರದಲ್ಲಿ ಕೈಗಾರಿಕೆಗಳು ಬಂದರೆ ಕೃಷಿಗೆ ಹಾನಿಕಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Kshetra Samachara
25/08/2022 08:51 pm