ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡಿಕೆ ಬೆಳೆಯಲ್ಲಿ ಕೆಂಪು ದುಂಬಿ ನಿರ್ವಹಣೆ ಪ್ರಾತ್ಯಕ್ಷಿಕೆ

ಮೂಡಬಿದ್ರೆ:ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ,

ಮಂಗಳೂರು ಮತ್ತು ಕೃಷಿ ಇಲಾಖೆ, ಜಿಲ್ಲಾ ಪಂಚಾಯತ ಮೂಡಬಿದರೆ ವತಿಯಿಂದ ಉತ್ತಲಾಡಿ ಗ್ರಾಮದ ಸದಾಶಿವ ಶೆಟ್ಟಿ ರವರ ತೋಟದಲ್ಲಿ ರೈತರಿಗೆ ಭತ್ತದಲ್ಲಿ ರೈತ ಪಾಠ ಶಾಲೆ ಮತ್ತು ಅಡಿಕೆ ಬೆಳೆಯಲ್ಲಿಕೆಂಪು ದುಂಬಿಯ ಸಮಗ್ರ ನಿರ್ವಹಣೆ ಕುರಿತು ತರಬೇತಿ ಮತ್ತು ಪಾತ್ರಕ್ತಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ಮಾತನಾಡಿ ಪಾರಂಪರಿಕ ಕೃಷಿ ಪದ್ಧತಿಗಳ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಆಳವಡಿಸಿ ಭತ್ತ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ರೋಗ ಮತ್ತು ಕೀಟಗಳನ್ನು ನಿರ್ವಹಣೆ ಮಾಡಿ ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ್, ಎಲ್ ರವರು ಮಾತನಾಡಿ ಮಣ್ಣಿನ ಮಹತ್ವ ಮತ್ತು ಹುಳಿ ಮಣ್ಣಿನ ನಿರ್ವಹಣೆಯ ಜೊತೆಗೆ ಭತ್ತ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶದ ನಿರ್ವಹಣೆ ಬಗ್ಗೆ ಮಾಹಿತಿಯನ್ನು

ನೀಡಿದರು.

ಈ ಸಂದರ್ಭದಲ್ಲಿ ತೆಂಕಮಿಜಾರು ಗ್ರಾಮದ ಕೃಷ್ಣಮೂರ್ತಿ ದೇವಾಸ್ಥಾನದ ಪಧಾನ ಅರ್ಚಕರಾದ ರಾಘವೇಂದ್ರ ಪೆಜತ್ತಾಯ ಗುರುಗಳು ಹಾಗೂ ಕೃಷಿಕರಾದ ನೇಮಿರಾಜ,ಸಂಜೀವ ಗೌಡ, ನಾರಾಯಣ,ಬಾಬುಗೌಡ,ಸೌಮ್ಯ, ಭಾರತಿ, ರವಿ ಹಾಗೂ ಇತರರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಆಯ್ದ 15 ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು, ಆತ್ಮಾ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ವ್ಯಾ.ಎಸ್, ನಿಂಗನಗೌಡ ರವರು ಭಾಗವಹಿ: ರೈತ ಪಾಠ ಶಾಲೆಯ ಮಹತ್ವ ಮತ್ತು ಕೃಷಿ ಇಲಾಖೆಯಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

Edited By : PublicNext Desk
Kshetra Samachara

Kshetra Samachara

29/11/2021 05:22 pm

Cinque Terre

2.21 K

Cinque Terre

0