ಉಡುಪಿ: ಉಡುಪಿ ಜಿಲ್ಲೆಯ ಭತ್ತದ ಬೇಸಾಯಗಾರರ ಕೂಗು ಅರಣ್ಯ ರೋದನವಾಗುತ್ತಿದೆ. ಇಷ್ಟೆಲ್ಲ ಹೋರಾಟಗಳ ಬಳಿಕವೂ ಸರಕಾರ ಇನ್ನೂ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿಲ್ಲ, ಖರೀದಿ ಕೇಂದ್ರ ಕೂಡ ಸ್ಥಾಪನೆ ಮಾಡಿಲ್ಲ!
ಜಿಲ್ಲೆಯಲ್ಲಿ ಶೇ. 50ರಷ್ಟು ಕಟಾವು ಕಾರ್ಯ ಮುಗಿದಿದೆ. ಭತ್ತ ದಾಸ್ತಾನು ಮಾಡಲು ಸ್ಥಳಾವಕಾಶ ಇಲ್ಲದ ರೈತರು, ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಉಡುಪಿಯಲ್ಲಿ ಮಳೆ ಕೊಂಚ ಇಳಿಮುಖವಾಗುತ್ತಿದ್ದು, ಎಲ್ಲ ಬೇಸಾಯಗಾರರು ಕಟಾವು ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ನಷ್ಟ ಅನುಭವಿಸುವ ಆತಂಕ ಎದುರಿಸುವಂತಾಗಿದೆ.
Kshetra Samachara
13/11/2021 02:03 pm