ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಂಬಲಪಾಡಿಯಲ್ಲಿ ಇಂದು ಹಡಿಲು ಭೂಮಿ ಕೃಷಿ ಕಟಾವು ಕಾರ್ಯ

ಅಂಬಲಪಾಡಿ: ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಉಡುಪಿಯಲ್ಲಿ ಹಮ್ಮಿಕೊಂಡ ಹಡಿಲು ಭೂಮಿ ಕೃಷಿ ಅಂದೋಲನದಡಿ ನಾಟಿ ಮಾಡಲಾದ ಭತ್ತದ ಬೆಳೆಯ ಕಟಾವು ಕಾರ್ಯ ಆರಂಭಗೊಂಡಿದೆ. ಇಂದು ಅಂಬಲಪಾಡಿ ಗ್ರಾಮದ ಬಂಕೇರಕಟ್ಟ ಬಳಿ ಗದ್ದೆಯ ಭತ್ತದ ಬೆಳೆ ಕಟಾವು ಕಾರ್ಯ ನಡೆಯಿತು.ಈ ಸಂದರ್ಭ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಆಗಮಿಸಿ ಕಟಾವು ಕಾರ್ಯ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರೋಹಿಣಿ, ಉಪಾಧ್ಯಕ್ಷ ಸೋಮನಾಥ್ ಬಿ.ಕೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಬಿಜೆಪಿ ಸಹ ವಕ್ತಾರ ಶಿವಕುಮಾರ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/10/2021 06:07 pm

Cinque Terre

2.15 K

Cinque Terre

0

ಸಂಬಂಧಿತ ಸುದ್ದಿ