ಬೈಂದೂರು: ರಾಜ್ಯ ಸರಕಾರದ ಆದೇಶದಂತೆ ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ "Former Registration Unified Beneficiary Information System" ( Fruits ) ಎಂಬ ತಂತ್ರಾಂಶದಲ್ಲಿ ರೈತರ ಆಧಾರ್ ನಂಬರ್, ಬ್ಯಾಂಕ್ ಖಾತೆ ನಂಬರ್ ಮತ್ತು ರೈತರಿಗೆ ಸಂಬಂಧಪಟ್ಟ ಎಲ್ಲ ಕೃಷಿ ಜಮೀನುಗಳ ಸರ್ವೆ ನಂಬರ್ ದಾಖಲಿಸಬೇಕಾಗಿದೆ.
ಆದುದರಿಂದ ಎಲ್ಲ ರೈತರು ನಿಮ್ಮ ಖಾತಾ ಪುಸ್ತಕದ ಪ್ರತಿ, ಆಧಾರ್ ಪ್ರತಿ ಮತ್ತು ಎಲ್ಲ ಕೃಷಿ ಜಮೀನುಗಳ ಮಾಹಿತಿಯನ್ನು 2 ದಿನದೊಳಗೆ ನಿಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಿಗರ ಕಚೇರಿಗೆ ತಲುಪಿಸಬೇಕಾಗಿ ಇಂದು ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮರವಂತೆ ಬಂದರಿನಲ್ಲಿ ಜರುಗಿದ ಗಣಹೋಮ,ಚಂಡಿಕಾ ಹೋಮ,ಸಮುದ್ರ ಪೂಜೆ ಪ್ರಯುಕ್ತ ನಡೆದ ಸಮಾರಂಭಕ್ಕೆ ಭೇಟಿ ನೀಡಿದ ಸಂದರ್ಭ ಬೈಂದೂರಿನ ತಹಶೀಲ್ದಾರ್ ಶೋಭಾ ಲಕ್ಷ್ಮೀ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
Kshetra Samachara
07/10/2021 09:16 pm