ಉಡುಪಿ : ಕೃಷಿ ಮಸೂದೆಯ ಪರ ವಿರೋಧದ ಚರ್ಚೆ ಜೋರಾಗಿ ನಡಿತಾ ಇದೆ. ಏನೆ ಹೊಸ ಕಾಯಿದೆ ಕಾನೂನು ಬಂದ್ರು ಕೃಷಿಕನ ಸಮಸ್ಯೆ ಗೆ ಮಾತ್ರ ಮುಕ್ತಿ ಇಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಬ್ಬ ಕೃಷಿಕ ವಾತಾವರಣ ದ ವೈಪರೀತ್ಯವನ್ನು ಎದುರಿಸಿ ಬೆಳೆ ತೆಗೆದರು, ಅಂತಿಮವಾಗಿ ಸೂಕ್ತ ಮಾರುಕಟ್ಟೆ ಬೆಲೆ ಸಿಗದೆ ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ...
ಹೌದು ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮಪಂಚಾಯತ್ ವ್ಯಾಪ್ತಿಯ ಸುಮಾರು 10ಎಕ್ರೆ ಕೃಷಿ ಭೂಮಿಯಲ್ಲಿ ಹಸಿರುಕುಂಬಳ ಕೃಷಿ ಕಾಯಕ ನಡೆಸಿ ಅಕಾಲಿಕ ಮಳೆಯ ನಡುವೆಯೂ ಫಸಲು ಕಂಡು ಬೆಲೆ ಸಿಗದೆ ಕಂಗಾಲಾಗಿ ತಲೆ ಮೇಲೆ ಕೈಕೊಟ್ಟು ಕೂರುವ ಸ್ಥಿತಿ ನಿರ್ಮಾಣಗೊಂಡಿದೆ. ಕೋಡಿ ಕನ್ಯಾಣದ ಯುವ ಕೃಷಿಕರಾದ ಕೃಷ್ಣಪೂಜಾರಿ,ವಿಶ್ವನಾಥ ಪೂಜಾರಿ,ಶೇಖರ್ ಮರಕಾಲ,ರಾಜು ಪೂಜಾರಿ ಇವರುಗಳು ತಮ್ಮ ತಮ್ಮ ಕೃಷಿಭೂಮಿಯ 10 ಎಕ್ರೆ ಪ್ರದೇಶದಲ್ಲಿ ಹಸಿರು ಕುಂಬಳ ಕೃಷಿ ನಡೆಸಿ ಉತ್ತಮ ಫಸಲು ಕಾಣುವ ಹೊತ್ತಿಗೆ ಅಕಾಲಿಕ ಚಂಡಮಾರುತ ಪ್ರಭಾವದಿಂದ ಹಳದಿ ರೋಗದ ನಡುವೆಯೂ ಸಾಮಾನ್ಯ ಫಸಲಿಗೆ ತೃಪ್ತಿಪಡಬೇಕಾದ ಸ್ಥಿತಿ ಬಂದಿದೆ. ಆದರೆ ಆರಕ್ಕೆರದ ಮೂರಕ್ಕಿಳಿಯದ ಫಸಲಿಗೆ ದರದಿಂದ ರೈತ ಕಂಗಾಲಾಗಿದ್ದಾನೆ. ಸರಕಾರದ ಮಾರ್ಗಸೂಚಿ ಇದ್ದರೂ ರೈತರಿಗೆ ಕಾಲಕ್ಕನುಗುಣವಾಗಿ ದರ ಸಿಗದೆ ಮಧ್ಯವರ್ತಿಗಳ ಕಾಟದಿಂದ ಶೋಚನೀಯ ಸ್ಥಿತಿಗೆ ತಲುಪುವಂತಾಗಿದೆ.
ಸದ್ಯ ಬೆಳೆದ ಹಸಿರು ಕುಂಬಳಕಾಯಿ ಗದ್ದೆಯಲ್ಲೆ ಕೊಳೆಯುವಂತಾಗಿದೆ. ಕುಂಬಳಕಾಯಿ ಖರೀದಿಸಲು ಮಧ್ಯವರ್ತಿಗಳು ಬರುತ್ತಿದ್ದರು ಕೂಡ ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ನ್ಯಾಯ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸೂಕ್ತ ಬೆಂಬಲ ಬೆಲೆ ಇಲ್ಲದ ಹಿನ್ನಲೆಯಲ್ಲಿ ಮಧ್ಯವರ್ತಿಗಳು ಮನಸ್ಸಿಗೆ ಬಂದ ಬೆಲೆಯಲ್ಲಿ ಕುಂಬಳಕಾಯಿ ಕೀಳುವ ಯೋಜನೆಯಲ್ಲಿದ್ದಾರೆ. ಇತ್ತ ಬೆಳೆದ ಕೃಷಿಕ ನ ಕಷ್ಟ ಸೂಕ್ತ ಬೆಲೆ ಇಲ್ಲದಂತಾಗಿರುವುದು ನೋವಿಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸುವ ರೈತರು ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ನೇರ ಮಾರುಕಟ್ಟೆಗೆ ಇಳಿಯುವುದು ಮನಸ್ಸು ಮಾಡಿದ್ದಾರೆ. ಆದರೆ 10 ಎಕ್ರೆಯ ಬೆಳೆ ಕೆಲವೆ ದಿನಗಳಲ್ಲಿ ಖಾಲಿ ಮಾಡುವುದು ಕಷ್ಟವಾಗಿದ್ದ, ಸರಕಾದ ಬೆಂಬಲ ಬೆಲೆ ನೀಡಿ ಕೃಷಿಕನ ನೆರವಿಗೆ ಬರುವ ನೀರಿಕ್ಷೆಯಿಂದ ಕಾಯುತ್ತಿದ್ದಾರೆ.
ಒಟ್ಟಾರೆಯಾಗಿ ರೈತ ದೇಶದ ಬೆನ್ನೆಲುಬು ಎನ್ನುವುದು ಸ್ಲೋಗನ್ ಆಗಿ ಉಳಿದಿದೆ. ಕಷ್ಟ ಪಟ್ಟು ದುಡಿಯುವ ರೈತ ಮಾತ್ರ ಬಿಸಿಲಿನಲ್ಲಿ ಬೆಳೆ ಬೆಳೆದು ಕಂಗಾಲಾಗಿ ಕೂತಿದ್ದಾನೆ. ಇನ್ನಾದರು ಬೆಂಬಲ ಸಿಗಬಹುದು ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
03/02/2021 04:10 pm