ಮುಲ್ಕಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ ಗೆ ಮುಲ್ಕಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಲ್ಕಿ ಹೋಬಳಿಯಲ್ಲಿ ಎಂದಿನಂತೆ ಬಸ್ಸುಗಳು ಸಂಚರಿಸುತ್ತಿದ್ದು, ಅಂಗಡಿ-ಮುಂಗಟ್ಟು, ಸರಕಾರಿ ಕಚೇರಿ, ಬ್ಯಾಂಕುಗಳು ತೆರೆದಿದೆ.
ಮುಲ್ಕಿ ಹೋಬಳಿಯ ಹಳೆಯಂಗಡಿ, ಕಿನ್ನಿಗೋಳಿ, ಕಟೀಲು, ಕಾರ್ನಾಡ್ ಪರಿಸರದಲ್ಲಿ ಜನಜೀವನ ಎಂದಿನಂತೆ ಇದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಇತಿಹಾಸ ಪ್ರಸಿದ್ಧ ಬಪ್ಪನಾಡು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಎಂದಿನಂತೆ ಭಕ್ತರು ಕಂಡುಬಂದಿದ್ದಾರೆ.
ಮಂಗಳೂರು - ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಂದಿನಂತೆ ಬಸ್ಸುಗಳು ಸಂಚರಿಸುತ್ತಿದ್ದು, ಯಾವುದೇ ಪ್ರತಿಭಟನೆ ನಡೆದಿಲ್ಲ. ಮುಲ್ಕಿ ಹೋಬಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.
Kshetra Samachara
08/12/2020 03:03 pm