ಉಡುಪಿ: ಉಡುಪಿಯಲ್ಲಿ ಬಂದ್ ನ ಯಾವುದೇ ಪರಿಣಾಮ ಸದ್ಯಕ್ಕೆ ಇಲ್ಲ.ವಾಹನ ಸಂಚಾರ-ಜನ ಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿದ್ದು,ಬಂದ್ ಕೇವಲ ಮಧ್ಯಾಹ್ನದ ಪ್ರತಿಭಟನೆಗೆ ಸೀಮಿತವಾಗಿದೆ.ಎಡಪಕ್ಷ ಮತ್ತು ಕಾಂಗ್ರೆಸ್ ಪ್ರತಿಭಟನೆ ನಡೆಸುವ ಸಾಧ್ಯತೆ ಬಿಟ್ಟರೆ ನಗರ ಎಂದಿನಂತೆ ಚಟುವಟಿಕೆಯಿಂದ ಕೂಡಿದೆ.
ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರೆ ನೀಡಿದ್ದ ಬಂದ್ ಗೂ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಇಂದೂ ಕೂಡ ಅದೇ ವಾತಾವರಣ ಇದೆ. ಬೆಳಿಗ್ಗೆ ಯಾವುದೇ ಸಂಘಟನೆಗಳು ಪ್ರತಿಭಟನೆಯಾಗಲೀ, ಬಂದ್ ಆಗಲೀ ನಡೆಸಲಿಲ್ಲ. ಸಂಜೆಯ ವೇಳೆಗೆ ಎಡಪಕ್ಷ ಹಾಗೂ ಕಾಂಗ್ರೇಸ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
Kshetra Samachara
08/12/2020 11:42 am