ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಎಂಬಲ್ಲಿ ಕಣಜದ ಹುಳು ದಾಳಿಗೆ ತಾಯಿ ಮಗು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಅತಿಕಾರಿಬೆಟ್ಟು ಮಟ್ಟು ಕಡೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಮಹಿಳೆ ಮೇರಿ ಫೆರ್ನಾಂಡಿಸ್ (35) ಎಂಬವರು ಬರುತ್ತಿದ್ದ ವೇಳೆಯಲ್ಲಿ ಮಟ್ಟು ಜಂಕ್ಷನ್ ಬಳಿಯ ಅಂಗಡಿ ಸಮೀಪ ಏಕಾಏಕಿ ಕಣಜದ ಹುಳು ದಾಳಿ ನಡೆದಿದೆ.
ಈ ಸಂದರ್ಭ ಮಹಿಳೆ ಮೇರಿ ಫೆರ್ನಾಂಡಿಸ್ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ 15 ವರ್ಷದ ಪ್ರಾಯದ ಮಗ ಗಂಭೀರ ಗಾಯಗೊಂಡು ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ಮಹಿಳೆಯನ್ನು ರಕ್ಷಿಸಲು ಹೋದ ಆಕೆಯ ಅಕ್ಕ ಐರಿನ್ ಫೆರ್ನಾಂಡಿಸ್ ರವರಿಗೂ ಕಣಜದ ಹುಳು ದಾಳಿ ನಡೆಸಿದ್ದು ಗಾಯಗಳಾಗಿವೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ವಿನಯ್ ಮತ್ತು ಸತೀಶ್ ಹೊಸಕೊಪ್ಪಲ ರವರು ಬೆಂಕಿಯ ಸೂಟೆ ಹಾಗೂ ಹೆಲ್ಮೆಟ್ ಹಾಕಿಕೊಂಡು ಹೋಗಿ ಇಬ್ಬರನ್ನು ರಕ್ಷಿಸಿ ಮುಕ್ಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾರಿ ಗಾತ್ರದ ಗಿಡುಗ ಕಣಜದ ಹುಳುಗಳ ಗೂಡಿನ ಮೇಲೆ ದಾಳಿ ನಡೆಸಿದ ಕಾರಣ ಘಟನೆ ನಡೆದಿದ್ದು ಮಟ್ಟು ಪ್ರಧಾನ ರಸ್ತೆ ವಾಹನ ಸಂಚಾರ ವ್ಯತ್ಯಯ ಉಂಟಾಗಿದೆ.
Kshetra Samachara
01/10/2022 02:30 pm