ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಬೊಲೆರೊ ಜೀಪು ಮತ್ತು ಬೈಕ್ ನಡುವೆ ಭೀಕರ ಅಪಘಾತ

ವಿಟ್ಲ: ಬೊಲೆರೊ ಜೀಪು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ಮೂವರು ಗಾಯಗೊಂಡ ಘಟನೆ ವಿಟ್ಲ-ಪುತ್ತೂರು ರಸ್ತೆಯ ಉರಿಮಜಲಿನಲ್ಲಿ ನಡೆದಿದೆ.

ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಪುತ್ತೂರು ಕಡೆಗೆ ತೆರಳುತ್ತಿದ್ದ ಬೊಲೆರೊ ಜೀಪು ನಡುವೆ ಈ ಅಪಘಾತ ಸಂಭವಿಸಿದೆ.

ಬೈಕ್‌ನಲ್ಲಿದ್ದ ಕನ್ಯಾನ ನಿವಾಸಿಗಳಾದ ಸವಾರ, ಮಹಿಳೆ ಮತ್ತು ಮಗು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಡಿ ಗ್ರೂಪ್ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಬೈಕ್ ಜೀಪಿನಡಿಗೆ ನುಗ್ಗಿದ್ದು, ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

Edited By : Nagaraj Tulugeri
Kshetra Samachara

Kshetra Samachara

23/09/2022 01:23 pm

Cinque Terre

7.32 K

Cinque Terre

0

ಸಂಬಂಧಿತ ಸುದ್ದಿ