ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಅಗ್ನಿ ಅವಘಡ; ದಾಖಲೆಗಳು ಬೆಂಕಿಗಾಹುತಿ

ಬ್ರಹ್ಮಾವರ: ತಾಲೂಕಿನ ಚಾರ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ತಡರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ದಾಖಲೆಗಳು ಬೆಂಕಿಗಾಹುತಿಯಾಗಿವೆ. ಇಂದು ಬೆಳಿಗ್ಗೆ ಪಂಚಾಯತ್ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಬ್ಬಂದಿ ಪಂಚಾಯತ್‌ನ ಬಾಗಿಲನ್ನು ಓಪನ್ ಮಾಡಿ ನೋಡಿದಾಗ ಕಟ್ಟಡದ ಒಳಗಡೆಯಿರುವ ರೆಕಾರ್ಡ್ ರೂಮಿನಲ್ಲಿ ಬೆಂಕಿ ಉರಿಯುತ್ತಿತ್ತು. ತಕ್ಷಣ ಸ್ಥಳೀಯರ ಸಹಕಾರದಿಂದ ನೀರನ್ನು ಹಾಕಿ ಬೆಂಕಿ ನಂದಿಸಲಾಯಿತು.

ಈ ಅವಘಡದಿಂದ ಪಂಚಾಯತ್ ನಲ್ಲಿದ್ದ ದಾಖಲೆ ಪತ್ರಗಳು ಭಾಗಶಃ ಸಂಪೂರ್ಣ ಸುಟ್ಟು ಹೋಗಿವೆ. ಮಾತ್ರವಲ್ಲ,ಫರ್ನಿಚರ್ಸ್‌ ಕಂಪ್ಯೂಟರ್‌ಗಳು ಸುಟ್ಟು ಭಸ್ಮವಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಅಗ್ನಿ ಅವಘಡದಿಂದ ಸಂಭವಿಸಿದೆ‌. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಘಟನೆಯಿಂದಾಗಿ ನಮ್ಮ ಪಂಚಾಯಿತ್‌ಗೆ ಅಪಾರ ನಷ್ಟವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಕುಸುಮಾ ಪ್ರಭು ಮಾಹಿತಿ ನೀಡಿದ್ದಾರೆ.

Edited By : Abhishek Kamoji
Kshetra Samachara

Kshetra Samachara

20/09/2022 03:58 pm

Cinque Terre

5.72 K

Cinque Terre

1

ಸಂಬಂಧಿತ ಸುದ್ದಿ