ಪಡುಪಣಂಬೂರು: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಅಡ್ಡ ಬಂದ ನಾಯಿ ಜೊತೆ ಅಪಘಾತ ತಪ್ಪಿಸಲು ಯತ್ನಿಸಿ ಕಾರು ಡಿವೈಡರ್ ಮೇಲೆರಿದ್ದು ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಕಾರು ಪಡುಪಣಂಬೂರು ಪೆಟ್ರೋಲ್ ಬಂಕ್ ತಲುಪುತ್ತಿದ್ದಂತೆ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದಿದ್ದು ಚಾಲಕ ಜಾನ್ ಡಿಸೋಜಾ ರವರು ಅಪಘಾತ ತಪ್ಪಿಸಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಏಕಾಏಕಿ ತಿರುಗಿ ಡಿವೈಡರ್ ಮೇಲೇರಿ ಮಂಗಳೂರು ಕಡೆ ಹೆದ್ದಾರಿಗೆ ಮುಖ ಮಾಡಿ ನಿಂತಿದೆ.
ಅಪಘಾತದ ರಪಸಕ್ಕೆ ಕಾರಿಗೆ ಹಾನಿಯಾಗಿದ್ದು ಹೆದ್ದಾರಿ ನಾಮಫಲಕ ದ್ವಂಸಗೊಂಡಿದೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಎಸ್ ಐ ಕಾಂತಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಲಾಯಿತು.
Kshetra Samachara
13/09/2022 06:49 pm