ಐಕಳ: ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಐಕಳ ತಿರುವು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 10 ಅಡಿ ಆಳದ ಗದ್ದೆಗೆ ಉರುಳಿದ್ದು ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.
ಕಾರು ನಿಡ್ಡೋಡಿ ಸಮೀಪದ ಮುಚ್ಚೂರಿನಿಂದ ಮುಲ್ಕಿ ರೈಲ್ವೆ ಸ್ಟೇಷನ್ ಕಡೆಗೆ ಬರುತ್ತಿದ್ದು, ಐಕಳ ತಲುಪುತ್ತಿದ್ದಂತೆ ಭಾರಿ ಮಳೆಗೆ ಎದುರಿನಿಂದ ಬಂದ ಲಾರಿ ಜೊತೆ ಅಪಘಾತ ತಪ್ಪಿಸಲು ಯತ್ನಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ, ಗದ್ದೆಗೆ ಉರುಳಿದೆ.
ಅಪಘಾತದಿಂದ ಕಾರಿಗೆ ಜಖಂಗೊಂಡಿದ್ದು, ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಲಾಯಿತು. ಐಕಳದ ತಿರುವು ಪ್ರದೇಶ ಕಳೆದ ಹಲವಾರು ವರ್ಷಗಳಿಂದ ಅನೇಕ ಅಪಘಾತಗಳು ಸಂಭವಿಸಿ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಸೂಕ್ತ ನಾಮಪಾಲಕಗಳನ್ನು ಅಳವಡಿಸಬೇಕು ಹಾಗೂ ಹೆದ್ದಾರಿ ಬದಿ ಸೂಕ್ತ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
21/08/2022 04:10 pm