ಉಡುಪಿ: ಅಪಘಾತಕ್ಕೀಡಾಗಿದ್ದ ಮಣಿಪಾಲದ ಆರ್ಕಿಟೆಕ್ಟ್ ಡಿಪಾರ್ಟ್ ಮೆಂಟ್ ನ ನಿವೃತ್ತ ಉದ್ಯೋಗಿ, ಕಟ್ಟಡಗಳ ವಿನ್ಯಾಸಕಾರ ಮಧ್ವರಾಜ್ ಭಟ್ (70) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆ.13ರಂದು ಪೆರ್ಡೂರು ಪಕ್ಕಾಲು ಬಳಿ ನಡೆದ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ನಿಧನರಾದರು.ಶ್ರೀಕೃಷ್ಣಮಠದ ಸುತ್ತು ಪೌಳಿಯ ನಿರ್ಮಾಣ ಕಾರ್ಯದಲ್ಲಿ, ರಾಜಾಂಗಣ,ಗೀತಾ ಮಂದಿರ ನಿರ್ಮಾಣ ಸಂಧರ್ಭ ವಿಶೇಷ ಮುತುವರ್ಜಿ ವಹಿಸಿದ್ದ ಇವರನ್ನು ಪೇಜಾವರ ಹಿರಿಯ ಶ್ರೀಗಳು ಶ್ರಿ ಕೃಷಾನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.ಮೃತರು ಪತ್ನಿ,ಇಬ್ಬರು ಪುತ್ರರು,ಓರ್ವ ಪುತ್ರಿ ಸಹಿತ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಅಷ್ಟ ಮಠಗಳ ಶ್ರೀಗಳು,ಉಡುಪಿ ಶಾಸಕ ರಘುಪತಿ ಭಟ್,ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Kshetra Samachara
17/08/2022 01:12 pm