ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನೀರಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಮುಂದುವರೆದ ಶೋಧಕಾರ್ಯ: ಇಂದು ಉಸ್ತುವಾರಿ ಸಚಿವರ ಭೇಟಿ

ಕುಂದಾಪುರ/ಉಪ್ಪುಂದ: ತಾಲೂಕಿನ ಕಾಲ್ತೋಡು ಚಪ್ಪರಿಕೆ–ಬೀಜಮಕ್ಕಿಯಲ್ಲಿ ಕಾಲು ಸಂಕದಿಂದ ಹೊಳೆಗೆ ಬಿದ್ದು ನೀರು ಪಾಲಾದ 7ರ ಬಾಲಕಿ ಸನ್ನಿಧಿಯ ಸುಳಿವು ಇನ್ನೂ ಸಿಕ್ಕಿಲ್ಲ.ಸತತ 36 ತಾಸುಗಳ ಕಾಲ ಬಾಲಕಿಗಾಗಿ ಶೋಧ ಕಾರ್ಯ ನಡೆಯುತ್ತಲೇ ಇದೆ. ಮಂಗಳವಾರ ದಿನವಿಡೀ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸೋಮವಾರ ಮಧ್ಯಾಹ್ನ 3. 30ರ ಸುಮಾರಿಗೆ ಚಪ್ಪರಿಕೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ 2ನೇ ತರಗತಿಯ ಸನ್ನಿಧಿ ಕಾಲು ಸಂಕದಿಂದ ಕಾಲು ಜಾರಿಬಿದ್ದು ನೀರುಪಾಲಾಗಿದ್ದಳು. ಆ ದಿನ ಸಂಜೆಯ ವರೆಗೆ ಹುಡುಕಾಟ ನಡೆಸಿದ್ದು, ಬಳಿಕ ಮಂಗಳವಾರ ದಿನವಿಡೀ ಸ್ಥಳೀಯರು, ಅಗ್ನಿಶಾಮಕ ದಳದ ಸಿಬಂದಿ, ಈಜುಪಟುಗಳು, ಮುಳುಗು ತಜ್ಞರೆಲ್ಲ ಸೇರಿ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ, ಆಗಾಗ ಬರುತ್ತಿದ್ದ ಮಳೆ ಹಾಗೂ ಹೊಳೆಯಲ್ಲಿ ನೀರಿನ ರಭಸ ಶೋಧಕಾರ್ಯಕ್ಕೆ ಅಡ್ಡಿ ಉಂಟು ಮಾಡಿದೆ.ಇವತ್ತು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

10/08/2022 01:56 pm

Cinque Terre

10.2 K

Cinque Terre

0

ಸಂಬಂಧಿತ ಸುದ್ದಿ