ಶಿರ್ವ: ನಾಗರಪಂಚಮಿಗೆಂದು ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ಬೈಕ್ ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಪಳ್ಳಿ- ಸೂಡಾ ರಸ್ತೆಯ ಮಕ್ಕೇರಿಬೈಲು ಎಂಬಲ್ಲಿ ಇಂದು ಸಂಭವಿಸಿದೆ.
ಮೃತರನ್ನು ಕಣಂಜಾರು ಗುಂಡಳಿಕೆ ನಿವಾಸಿ ತುಕ್ರ ಪೂಜಾರಿ ಎಂಬವರ ಮಗಳು ಪುಷ್ಪ(49) ಎಂದು ಗುರುತಿಸಲಾಗಿದೆ. ಇವರು ತನ್ನ ಸಹೋದರ ರಾಜೇಶ್ ಜೊತೆ ಮನೆಯಿಂದ ಬೈಕ್ ಲ್ಲಿ ನಾಗರಪಂಚಮಿಯ ಪ್ರಯುಕ್ತ ಸೂಡಾ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/08/2022 09:22 pm