ಕೋಟ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಕಸ್ಮಾತ್ತಾಗಿ ನೀರಿಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದಾರೆ.
ಸುಮಂತ ಮೊಗವೀರ ಮೃತಪಟ್ಟ ಮೀನುಗಾರ ಯುವಕ.ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ಬಳಿ ಈ ದುರ್ಘಟನೆ ಸಂಭವಿಸಿದೆ.
ಪಡುಕರೆ ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಕಡಲ ಅಲೆಯ ಹೊಡೆತಕ್ಕೆ ಸಮುದ್ರಕ್ಕೆ ಉರುಳಿ ಬಿದ್ದ ಸುಮಂತ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
Kshetra Samachara
22/07/2022 10:08 pm