ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ ಬ್ರೇಕಿಂಗ್: ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಯಿತು ರೆಸ್ಟೋರೆಂಟ್!

ಮಣಿಪಾಲ: ಮಣಿಪಾಲ ಪೇಟೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ವಸತಿಗೃಹದಲ್ಲಿದ್ದ ರೆಸ್ಟೋರೆಂಟ್ ಒಂದು ಸುಟ್ಟು ಕರಕಲಾದ ಘಟನೆ ಇಂದು ಸಂಭವಿಸಿದೆ. ಇಲ್ಲಿನ ಖಾಸಗಿ ಲಾಡ್ಜ್‌ನ ರೆಸ್ಟೋರೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಫ್ಯಾಮಿಲಿ ರೆಸ್ಟೋರೆಂಟ್ಅನ್ನು ವ್ಯಾಪಿಸಿದೆ.

ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಯಿತು. ಸತತ ಕಾರ್ಯಚರಣೆಯಿಂದ ಬೆಂಕಿ ನಂದಿಸಲಾಗಿದೆ. ಆದರೆ ಫ್ಯಾಮಿಲಿ ರೆಸ್ಟೋರೆಂಟ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ರೆಸ್ಟೋರೆಂಟ್‌ನ ಪೀಠೋಪಕರಣಗಳ ಜೊತೆಗೆ ಸಾಕಷ್ಟು ಮದ್ಯದ ಬಾಟಲಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

Edited By : Shivu K
Kshetra Samachara

Kshetra Samachara

15/07/2022 07:54 am

Cinque Terre

14.53 K

Cinque Terre

2

ಸಂಬಂಧಿತ ಸುದ್ದಿ