ಉದ್ಯಾವರ: ಇಂದು ಸಂಜೆ ವೇಳೆ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ.ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ.ಮೊದಲು ಉಡುಪಿನ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಉದ್ಯಾವರ ಸೇತುವೆ ಬಳಿ ಇನ್ನೊಂದು ಕಾರ್ ಟಿಕ್ಕಿ ಹೊಡೆಯಿತು.
ಘಟನೆಯಲ್ಲಿ ಕಾರುಗಳು ಜಖಂಗೊಂಡಿದ್ದು ಸವಾರರು ಪರಾಗಿದ್ದಾರೆ. ಅದೇ ಸೇತುವೆ ಬಳಿ ಮತ್ತೆ ಎರಡು ಕಾರುಗಳು ಮತ್ತು ಈಚರ್ ಟೆಂಪೋ ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ಘಟನೆಯಲ್ಲೂ ಕೂಡ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಕಾಪು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.ಘಟನೆ ಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
Kshetra Samachara
14/07/2022 09:54 pm