ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ಬ್ರೇಕಿಂಗ್ ನ್ಯೂಸ್: ಮರವಂತೆ ಹೆದ್ದಾರಿಯಿಂದ ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು ,ಮತ್ತೋರ್ವ ನಾಪತ್ತೆ!

ಕುಂದಾಪುರ: ತಾಲೂಕಿನ ಮರವಂತೆಯಲ್ಲಿ ಭಾರೀ ಅವಘಡ ಸಂಭವಿಸಿದ್ದು, ಓರ್ವ ಮೃತಪಟ್ಟು ಮತ್ತೋರ್ವ ನೀರುಪಾಲಾಗಿದ್ದಾನೆ.

ರಾತ್ರಿ ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಕಾರು ಸಮುದ್ರಕ್ಕೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಸಮುದ್ರಕ್ಕೆ ಉರುಳಿ ಬಿದ್ದ ಕಾರಿನಲ್ಲಿ ನಾಲ್ವರಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆದಿದೆ. ಉಳಿದ ಇಬ್ಬರು ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಗ್ನಿಶಾಮಕ ಸಿಬಂದಿ ಮತ್ತು ಮುಳುಗು ತಜ್ಞರು ಆಗಮಿಸಿ ಕಾರನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಂಗೊಳ್ಳಿ ಪೊಲೀಸರು ಘಟನಾ ಸ್ಥಳದಲ್ಲಿದ್ದಾರೆ.

Edited By : Vijay Kumar
PublicNext

PublicNext

03/07/2022 08:17 am

Cinque Terre

42.02 K

Cinque Terre

0

ಸಂಬಂಧಿತ ಸುದ್ದಿ