ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕಲಕರಿಯ: ಜೀಪ್ ಸ್ಕಿಡ್ ಯುವತಿ ಸಾವು; ಮೂವರಿಗೆ ಗಾಯ

ಮುಂಡ್ಕೂರು: ಕಿನ್ನಿಗೋಳಿ ಬೆಳ್ಮಣ್ಣು ರಾಜ್ಯ ಹೆದ್ದಾರಿಯ ಸಂಕಲಕರಿಯದಲ್ಲಿ ಜೀಪ್ ಸ್ಕಿಡ್‌ ಆಗಿ ಪಲ್ಟಿಯಾದ ಪರಿಣಾಮ ಯುವತಿಯೊಬ್ಬಳು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.

ಮುಂಡ್ಕೂರು ಸಮೀಪದ ಮುಲ್ಲಡ್ಕದ ನಾನಿಲ್ತಾರ್ ಎಂಬಲ್ಲಿಯ ಜಯರಾಮ ಎಂಬವರಿಗೆ ಸೇರಿದ ಜೀಪ್‌‌ನ್ನು ಭಾಸ್ಕರ ಎಂಬವರು ಚಲಾಯಿಸುತ್ತಿದ್ದ ವೇಳೆ ಜೀಪ್‌ ಸ್ಕಿಡ್‌ ಆಗಿ ಪಲ್ಟಿಯಾಗಿದ್ದು ಅಪಘಾತದ ರಭಸಕ್ಕೆ ಜೀಪ್‌‌ನಲ್ಲಿ ಚಾಲಕ ಸೇರಿ ಐದು ಮಂದಿ ಇದ್ದು ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಉಳಿದಂತೆ ಜೀಪ್ ನಲ್ಲಿದ್ದ ಮೂವರಿಗೆ ಗಂಭೀರ ಗಾಯಾಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ರಾಡಿ-ಬಜಪೆ ರಾಜ್ಯ ಹೆದ್ದಾರಿಯ. ಬೆಳ್ಮಣ್ -ಸಂಕಲಕರಿಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು , ಅಲ್ಲಲ್ಲಿ ರಸ್ತೆ ಅಗೆದು ಹಾಕಿದ್ದರಿಂದ ರಸ್ತೆಯ ತಿರುವಿನ ಬಗ್ಗೆ ತಿಳಿಯದೆ ಅಪಘಾತ ನಡೆದಿದೆ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

19/06/2022 10:03 pm

Cinque Terre

8.31 K

Cinque Terre

0

ಸಂಬಂಧಿತ ಸುದ್ದಿ