ಮಣಿಪಾಲ: ಯುವತಿಯೊಬ್ಬಳು ಚಲಾಯಿಸುತ್ತಿದ್ದ ಸ್ಕೂಟಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರೆ ಸಾವನ್ನಪ್ಪಿ, ಸಹ ಸವಾರೆ ಗಾಯಗೊಂಡ ಘಟನೆ ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಣಿಪಾಲದ ಎಂ.ವರ್ಷಿಣಿ ಎಂಬ ಯುವತಿ ಸ್ನೇಹಿತೆ ಹಿಂದುಜಾ ಅವರೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ತಲೆಗೆ ತೀವ್ರ ಏಟುಬಿದ್ದು ಹಿಂದುಜಾ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ವರ್ಷಿಣಿ ಅವರಿಗೆ ಗಾಯವಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Kshetra Samachara
16/06/2022 08:22 pm