ಮಲ್ಪೆ: ಇಲ್ಲಿಗೆ ಸಮೀಪದ ಕಲ್ಮಾಡಿಯ ಮನೆಯೊಂದರ ಮಹಡಿಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಲ್ಮಾಡಿಯ ನಿವಾಸಿ ವಿಠ್ಠಲ್ ಕೋಟ್ಯಾನ್ ಎಂಬುವರ ಮನೆಯ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಳಿಕ ಅದು ಇಡೀ ಮನೆಗೆ ವ್ಯಾಪಿಸಿತು. ಈ ಸಂಬಂಧ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎನ್ನುವ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
Kshetra Samachara
09/06/2022 09:04 am