ಬಜಪೆ: ಕಟೀಲಿನಿಂದ ಬಜಪೆಗೆ ಸಾಗುವ ರಾಜ್ಯ ಹೆದ್ದಾರಿಯ ಕಟೀಲು ಸೇತುವೆಯ ಬಳಿ ಸಮೀಪದ ಕೆರೆಯಿಂದ ನೀರು ತುಂಬಿಸಿಕೊಳ್ಳಲು ರಾಜ್ಯ ಹೆದ್ದಾರಿಯಲ್ಲೇ ನಿಲುಗಡೆ ಮಾಡುದರಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಟೀಲು ಸೇತುವೆ ಸಮೀಪ ರಸ್ತೆ ಕೂಡ ತೀರಾ ಇಕ್ಕಟ್ಟಾಗಿದ್ದು, ರಸ್ತೆಯಲ್ಲಿ ದಿನಂಪ್ರತಿ ವಾಹನಗಳ ಸಂಖ್ಯೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಕಿನ್ನಿಗೋಳಿ, ಕಟೀಲು ಹಾಗೂ ಇನ್ನಿತರ ಕಡೆಗಳಿಂದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ರಸ್ತೆ ಮುಖೇನವೇ ಸಂಚರಿಸಬೇಕಾಗುತ್ತದೆ. ಅಲ್ಲದೆ ಪ್ರಸಿದ್ದ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬಜಪೆ ಹಾಗೂ ಇನ್ನಿತರ ಕಡೆಗಳಿಂದ ಬರುವಂತಹ ಭಕ್ತರು ಈ ಸೇತುವೆಯ ಮೂಲಕನೇ ಸಾಗಬೇಕಾಗುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಹೆದ್ದಾರಿಯ ಸಮೀಪ ನೀರು ತುಂಬಿಸಿಕೊಳ್ಳಲು ನೀರಿನ ಟ್ಯಾಂಕರ್‌ಅನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ದಿನಂಪ್ರತಿ ಸಾಗುವಂತಹ ವಾಹನ ಸವಾರ ರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ತೆಗೆದುಕೊಳ್ಳುದರ ಜೊತೆಗೆ, ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಟ್ಯಾಂಕರ್ ನಿಲುಗಡೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
26/05/2022 06:46 pm