ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉದ್ಯಾನವನದಲ್ಲಿ ವಿಶ್ರಮಿಸುತ್ತಿದ್ದ ವ್ಯಕ್ತಿ ಸಾವು!

ಉಡುಪಿ: ವ್ಯಕ್ತಿಯೊಬ್ಬರು ಪಾರ್ಕ್ ನಲ್ಲಿ ವಿಶ್ರಾಂತಿಪಡೆಯುತ್ತಿರುವಾಗಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಕೊರಂಗ್ರಪಾಡಿಯ ರವಿ ಶೆಟ್ಟಿ (55) ಮೃತರು.ಇವರು ಜಿಲ್ಲಾಸ್ಪತ್ರೆಯ ಮುಂಭಾಗದ ಉದ್ಯಾನವನದಲ್ಲಿರುವಕಲ್ಲುಬೆಂಚಿನ ಮೇಲೆ ಮಲಗಿದ್ದರು.ಮಲಗಿದ್ದ ಸ್ಥಿತಿಯಲ್ಲೇ ಇವರುಸಾವನ್ನಪ್ಪಿದ್ದಾರೆ.

ಮಲಗಿದ್ದಲ್ಲೇ ಇವರಿಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ.ಸಮಾಜ ಸೇವಕ ನಿತ್ಯಾನಂದ ಒಳಕಾಡು ಮೃತರ ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡುವ ವ್ಯವಸ್ಥೆ ಮಾಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

16/05/2022 11:32 am

Cinque Terre

14.52 K

Cinque Terre

0

ಸಂಬಂಧಿತ ಸುದ್ದಿ