ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ: ಇಬ್ಬರೂ ಗಂಭೀರ ಗಾಯ !

ಉಡುಪಿ: ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಪಾದಚಾರಿ ಮತ್ತು ಸವಾರ ಗಂಭೀರ ಗಾಯಗೊಂಡಿರುವ ಘಟನೆ ಕೊರಂಗ್ರಪಾಡಿಯಿಂದ ಕುಕ್ಕಿಕಟ್ಟೆ ಹೋಗುವ ರಸ್ತೆಯಲ್ಲಿ ರಾತ್ರಿ ನಡೆದಿದೆ.

ವಿಷಯ ತಿಳಿದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಗಾಯಾಳುಗಳನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದಿಂದ ಪಾದಚಾರಿಯ ಕಾಲು ತುಂಡಾಗಿದ್ದು, ಜಿಲ್ಲಾಸ್ಪತ್ರೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಚಂದ್ರಕಾಂತ ಶೆಟ್ಟಿ (60) ಎಂದು ತಿಳಿದು ಬಂದಿದೆ.

ಪಾದಚಾರಿ ವಲಸೆ ಕಾರ್ಮಿಕ ಕೃಷ್ಣ ಬಸವ ಪಟ್ನ ದಾವಣಗೆರೆಯ ನಿವಾಸಿಯಾಗಿದ್ದು, ಸಂಬಂಧಿಕರು ವೆನ್ ಲಾಕ್ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Edited By : Shivu K
Kshetra Samachara

Kshetra Samachara

21/04/2022 12:37 pm

Cinque Terre

16.71 K

Cinque Terre

0

ಸಂಬಂಧಿತ ಸುದ್ದಿ