ಮಂಗಳೂರು: ಶೃಂಗೇರಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಗಂಜಿಮಠದ ಬಳಿ ಮಗುಚಿ ಬಿದ್ದ ಘಟನೆ ಏ.13 ರಾತ್ರಿರ 9ಗಂಟೆ ಸುಮಾರಿಗೆ ನಡೆದಿದೆ.
ಶೃಂಗೇರಿಯಿಂದ ಮಂಗಳೂರಿಗೆ ಬರುತ್ತಿದ್ದ ನಿಶ್ಮಿತಾ ಎಂಬ ಎಕ್ಸ್ಪ್ರೆಸ್ ಬಸ್ ನಗರದ ಗಂಜಿಮಠ ಪೆಟ್ರೋಲ್ ಪಂಪ್ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ತಲುಪುತ್ತಿದ್ದಂತೆ ಅದರ ಸ್ಟೇರಿಂಗ್ ಏಕಾಏಕಿ ತುಂಡಾಗಿದೆ.
ಪರಿಣಾಮ ಬಸ್ ರಸ್ತೆಯ ಬದಿ ಮಗುಚಿ ಬಿದ್ದಿದೆ. ಇದರಿಂದ ನಾಲ್ವರು ಪ್ರಯಾಣಿಕರ ಮೂಳೆ ಮುರಿತಗೊಂಡು ಗಾಯವಾಗಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿರುವ ಬಜ್ಪೆ ಪೊಲೀಸರು ಹಾಗೂ ಸಿಬ್ಬಂದಿ ಬಸ್ ಅನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್ ರಸ್ತೆ ಬದಿ ಮಗುಚಿ ಬಿದ್ದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿದ್ದು ಬಳಿಕ ಸಂಚಾರ ಸುಗಮ ಗೊಳಿಸಿದ್ದಾರೆ.
Kshetra Samachara
14/04/2022 09:18 am