ಮಂಗಳೂರು: ದ್ವಿಚಕ್ರ ಹಾಗೂ ಬಸ್ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ರಸ್ತೆ ಮಧ್ಯೆಯೇ ಖಾಸಗಿ ಸಿಟಿ ಬಸ್ಸೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಮಂಗಳೂರು ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ನಡೆದಿದೆ.
ಮಂಗಳೂರು - ಗುರುಪುರ ನಡುವೆ ಸಂಚರಿಸುವ ರೂಟ್ ಸಂಖ್ಯೆ 45 ಅಶೆಲ್ ಹೆಸರಿನ ಬಸ್ ಗೆ ಸಿಗ್ನಲ್ ಬಿಟ್ಟ ಸಂದರ್ಭ ದ್ವಿಚಕ್ರ ವಾಹನ ಢಿಕ್ಕಿಯಾಗಿದೆ. ಪರಿಣಾಮ ಬಸ್ ಮುಂಭಾಗದ ಚಕ್ರಕ್ಕೆ ಸಿಲುಕಿರುವ ದ್ವಿಚಕ್ರ ವಾಹನವನ್ನು ಎಳೆದೊಯ್ದಿದೆ. ಆಗ ಬಸ್ ಅಡಿಭಾಗ ಡ್ರ್ಯಾಗ್ ಆಗಿ ಡಿಸೇಲ್ ಸೋರಿಕೆಯಾಗಿ ಬಸ್ ಗೆ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತದಿಂದ ದ್ವಿಚಕ್ರ ವಾಹನದಲ್ಲಿದ್ದ ಸವಾರನ ಕಾಲಿಗೆ ಗಾಯಗೊಂಡಿದ್ದು ಆತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
26 ವರ್ಷದ ಈತ ವೆಲೆನ್ಸಿಯಾದಲ್ಲಿ ಸಿಎ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ಬಸ್ ನಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ 28 ಮಂದಿಯೂ ಸುರಕ್ಷಿತರಾಗಿದ್ದಾರೆ. ಬಸ್ ನಲ್ಲಿದ್ದವರು ಬೆಂಕಿ ಹತ್ತಿದ ತಕ್ಷಣ ಬಸ್ ನಿಂದ ಇಳಿದು ಪಾರಾಗಿದ್ದಾರೆ. ತಕ್ಷಣ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಗೂ ಪೊಲೀಸ್ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸ್ಲಗ್ ; ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್
PublicNext
08/04/2022 05:16 pm