ಮಂಗಳೂರು: ಯೂ ಟರ್ನ್ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಫುಟ್ ಪಾತ್ ಗೆ ಇಳಿದು ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಈ ಅಪಘಾತದ ವೇಳೆ ವ್ಯಕ್ತಿಯೋರ್ವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಹೌದು ಮಂಗಳೂರಿನ ಕೊಡಿಯಾಲಬೈಲ್ ನಲ್ಲಿ ಬುಧವಾರ ಈ ಘಟನೆ ನಡೆದಿದೆ. ರಥಬೀದಿ ಕಡೆಯಿಂದ ಕೊಡಿಯಾ ಲಬೈಲ್ ಕರ್ನಾಟಕ ಬ್ಯಾಂಕ್ ಇರುವ ರಸ್ತೆಗೆ ಬಂದಿರುವ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಗೊಂಡಿದೆ.
ರಥಬೀದಿಯಿಂದ ಕೊಡಿಯಾಲಬೈಲ್ ಗೆ ಬರುವ ಸ್ವಲ್ಪ ಎತ್ತರದಲ್ಲಿರುವ ರಸ್ತೆಗೆ ಸಂಪರ್ಕಗೊಂಡ ಕಾರು ಏಕಮುಖ ಸಂಚಾರವುಳ್ಳ ರಸ್ತೆಯಲ್ಲಿ ಮುಂದೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಫುಟ್ ಪಾತ್ ಗೆ ಇಳಿದು ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದೆ.
PublicNext
25/03/2022 05:20 pm