ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ಭೀಕರ ಸರಣಿ ಅಪಘಾತ;ಇಬ್ಬರು ಪವಾಡ ಸದೃಶ ಪಾರು

ಮುಲ್ಕಿ: ಹಳೆಯಂಗಡಿ ಕಿನ್ನಿಗೋಳಿ ಹೆದ್ದಾರಿಯ ಪಕ್ಷಿಕೆರೆ ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಳೆಯಂಗಡಿ ಕಡೆಯಿಂದ ಕಿನ್ನಿಗೋಳಿ ಕಡೆ ಬರುತ್ತಿದ್ದ ಈಕೋ ಸ್ಪೋರ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ, ತೀರಾ ಬಲ ಬದಿ ಚಲಿಸಿ, ಪಕ್ಷಿಕೆರೆ ಜಂಕ್ಷನ್ ಬಳಿ ಆಟೋ ನಿಲ್ದಾಣದಲ್ಲಿ ಬಾಡಿಗೆಗಾಗಿ ನಿಂತಿದ್ದ ನಾಲ್ಕು ಆಟೋಗಳಿಗೆ ಡಿಕ್ಕಿ ಹೊಡೆದಿದ್ದು ಎರಡು ಆಟೋ ಪಲ್ಟಿಯಾಗಿವೆ.

ಅಪಘಾತದಿಂದ ಆಟೋ ಚಾಲಕರಾದ ಪಕ್ಷಿಕೆರೆ ಹೊಸ ಕಾಡು ನಿವಾಸಿಗಳಾದ ರಮೇಶ್ ಕುಲಾಲ್ ಮತ್ತು ಹರೀಶ್ ಅವರಿಗೆ ತೀವ್ರ ಗಾಯಗಳಾಗಿವೆ. ಉಳಿದಂತೆ ಅಹಮದ್ ಭಾವ ಮತ್ತು ಮಯ್ಯದಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.

ಅಪಘಾತದಿಂದ ಎರಡು ರಿಕ್ಷಾಗಳು ಸಂಪೂರ್ಣ ಜಖಂಗೊಂಡಿದ್ದು ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರು ಚಾಲಕನ ನಿರ್ಲಕ್ಷ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದ ಸಂದರ್ಭ ಭೀಕರ ಶಬ್ದ ಉಂಟಾಗಿದ್ದು ಸ್ಥಳೀಯರು ಭಯ ಭೀತರಾಗಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಸಂಜೆ ಹೊತ್ತು ಶಾಲಾ ಮಕ್ಕಳು ಒಂದು ವೇಳೆ ಬಸ್ಸಿಗೆ ಕಾಯುತ್ತಿದ್ದರೆ, ದೊಡ್ಡ ಅನಾಹುತವೇ ಆಗಿ ಬಿಡುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Edited By : Nagesh Gaonkar
PublicNext

PublicNext

21/03/2022 06:51 pm

Cinque Terre

51.07 K

Cinque Terre

0

ಸಂಬಂಧಿತ ಸುದ್ದಿ