ಸಂತೆಕಟ್ಟೆ: ಉಡುಪಿಯ ಸಂತೆಕಟ್ಟೆಯಲ್ಲಿ ಇಂದು ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮಗಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬಸ್ ಮತ್ತು ಸ್ಕೂಟರ್ ನಡುವೆ ಈ ಅಪಘಾತ ಸಂಭವಿಸಿದೆ. ಗಣೆಶ್ ಪೈ (58) ಮತ್ತು ಮಗಳು ಗಾಯತ್ರಿ ಪೈ ಮೃತ ನತದೃಷ್ಟರು.
ಹುಬ್ಬಳ್ಳಿಯಿಂದ ಆಗಮಿಸಿದ್ದ ಮಗಳನ್ನು ಕರೆದುಕೊಂಡು ಹೋಗಲು ತಂದೆ ತನ್ನ ಸ್ಕೂಟರ್ ನಲ್ಲಿ ಬಂದಿದ್ದರು.ತಂದೆ ಮತ್ತು ಮಗಳು ಸ್ಕೂಟರ್‌ನಲ್ಲಿ ಸಂತೆಕಟ್ಟೆ ಜಂಕ್ಷನ್ ನಲ್ಲಿ ರಸ್ತೆ ದಾಟುತಿದ್ದಾಗ ಕೊಲ್ಲೂರು ಕಡೆಗೆ ಸಾಗುತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎಸಿ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
PublicNext
02/03/2022 09:02 am