ಸುಬ್ರಹ್ಮಣ್ಯದ ಕುಲ್ಕುಂದ ಕ್ಕೆ ಹೋಗುವಲ್ಲಿ ಅರಣ್ಯ ಇಲಾಖೆ ಬಳಿ ಪೊಲೀಸರು ಚೆಕ್ಪೋಸ್ಟ್ ನಿರ್ಮಿಸಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಸರಣಿ ಅಪಘಾತ ಸಂಭವಿಸಿದ ಘಟನೆ ಫೆ. 12 ರಂದು ಸಂಜೆ ವರದಿಯಾಗಿದೆ.
ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ಪರಿಶೀಲನೆಗೆ ನಿಲ್ಲಿಸಿದ ಸಂದರ್ಭ ಇಂದಿನಿಂದ ವೇಗವಾಗಿ ಬಂದ ವಾಹನವೊಂದು ಎದುರಿಗೆ ನಿಂತಿದ್ದ ವಾಹನಕ್ಕೆ ಗುದ್ದಿದ ಪರಿಣಾಮ ಸಾಲಿನಲ್ಲಿ ನಿಂತಿದ್ದ ಬೇರೆ ಮೂರು ವಾಹನಗಳಿಗೆ ಡಿಕ್ಕಿಯಾಗಿ ವಾಹನಗಳು ಅಲ್ಪಸ್ವಲ್ಪ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ವಾಹನ ಸವಾರರು ಪೊಲೀಸರ ಬಳಿ ವಾಗ್ವಾದಕ್ಕಿಳಿದಾಗ ಈ ವೇಳೆ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯ ಠಾಣಾ ಉಪನಿರೀಕ್ಷಕ ಜಂಬೂ ಮಹಾಜನ್ ಪ್ರಕರಣವನ್ನು ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.
Kshetra Samachara
12/02/2022 08:42 pm