ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಅಮ್ಟೂರು ಎಂಬಲ್ಲಿನ ಸುಬ್ಬಕೋಡಿ ಬಳಿ ಕಾರು ಮತ್ತು ಆಟೊ ನಡುವೆ ಡಿಕ್ಕಿ ಸಂಭವಿಸಿ ಆಟೊದಲ್ಲಿದ್ದ ಮಹಿಳೆಯೊಬ್ಬರು ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಕಲ್ಲಡ್ಕ ಮುರಬೈಲು ನಿವಾಸಿ ದೇವಕಿ (70) ಸಾವನ್ನಪ್ಪಿದ ಮಹಿಳೆ. ಘಟನೆಯಲ್ಲಿ ಆಟೊ ಚಾಲಕ ಭೋಜ ಮೂಲ್ಯ ಗಾಯಗೊಂಡಿದ್ದಾರೆ. ಕಾರು ಮತ್ತು ಆಟೊ ಪರಸ್ಪರ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ.
ಈ ಸಂದರ್ಭ ಎರಡೂ ವಾಹನಗಳು ಜಖಂಗೊಂಡಿದ್ದು, ಕಾರಿನಲ್ಲಿದ್ದ ಯಾರಿಗೂ ಗಾಯವಾಗಿಲ್ಲ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/02/2022 08:43 pm