ಮುಲ್ಕಿ: ಮೂಡಬಿದ್ರೆ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಮೂರುಕಾವೇರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ
ಅಪಘಾತದಲ್ಲಿ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ
ಮೂಡಬಿದ್ರೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಕಾರು ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಸಂಚರಿಸುತ್ತಿದ್ದ ಕಾರಿಗೆ ಮೂರುಕಾವೇರಿ ಕಟೀಲು ದ್ವಾರದ ಜಂಕ್ಷನ್ ಬಳಿ ಡಿಕ್ಕಿ ಹೊಡೆದಿದೆ,
ಅಪಘಾತದಿಂದ ಎರಡೂ ಕಾರುಗಳಿಗೆ ಹಾನಿಯಾಗಿದ್ದು ಟ್ರಾಪಿಕ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಪಘಾತದ ಸಂದರ್ಭ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು ಮಾತಿನ ಚಕಮಕಿ ನಡೆಯಿತು.ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂರುಕಾವೇರಿ ಕಟೀಲು ದ್ವಾರದ ಜಂಕ್ಷನ್ ತೀರಾ ಅಪಾಯಕಾರಿಯಾಗಿದ್ದು ಅತಿವೇಗದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬಂದ ವಾಹನಗಳು ಕಟೀಲು ದೇವಸ್ಥಾನದ ಹೆದ್ದಾರಿಯಲ್ಲಿ ಏಕಾಏಕಿ ತಿರುವು ಪಡೆಯುವಾಗ ಅನೇಕ ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
PublicNext
05/02/2022 08:53 am