ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಡಪದವು: ಬೋರುಗುಡ್ಡೆ ಬೀಡಿ ಕಾಲನಿ ಬಳಿ ಗುಡ್ಡಕ್ಕೆ ಬೆಂಕಿ

ಬಜಪೆ : ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಬೀಡಿ ಕಾಲನಿಯ ಸಮೀಪದ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ವೊಂದು ತಪ್ಪಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ವಸತಿ ಪ್ರದೇಶಕ್ಕೆ ಬೆಂಕಿ ಹಬ್ಬಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ನಿನ್ನೆ ಮಧ್ಯಾಹ್ನದ ವೇಳೆಗೆ ಎಕಾಏಕಿ ಗುಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸೈಟ್ ನಿವಾಸಿಗಳು ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಸಹಿತ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದ್ದರು . ಕೂಡಲೇ ಸ್ಥಳಕ್ಕೆ ದಾವಿಸಿದ ಅಧ್ಯಕ್ಷರು ಮತ್ತು ಸದಸ್ಯರು ಸ್ಥಳೀಯರ ಜತೆ ಸೇರಿ ಬೆಂಕಿ ನಂದಿಸಿದರು.

ಬೆಂಕಿ ಬಿದ್ದ ಗುಡ್ಡದ ಬಳಿಯಲ್ಲೇ ಬೀಡಿ ಕಾಲನಿ ಇದ್ದು ಬೆಂಕಿ ಕಾಲನಿಗೆ ಹಬ್ಬುತ್ತಿದ್ದರೆ ಹಲವು ಮನೆಗಳು ಅಪಾಯಕ್ಕೆ ಸಿಲುಕುವಂತಹ ಲಕ್ಷಣಗಳಿದ್ದವು ಎಂದು ಸ್ಥಳೀಯರು ಹೇಳುತ್ತಿದ್ದರು.

Edited By : Nagaraj Tulugeri
Kshetra Samachara

Kshetra Samachara

26/01/2022 07:12 pm

Cinque Terre

10.97 K

Cinque Terre

0

ಸಂಬಂಧಿತ ಸುದ್ದಿ