ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ತ್ರಾಸಿ ಗೇರು ಪ್ಲಾಂಟೇಷನ್ ನಲ್ಲಿ ಅಗ್ನಿ ಅವಘಡ; ತಪ್ಪಿದ ದುರಂತ

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಇಂದು ಮಧ್ಯಾಹ್ನ ಗೇರು ಪ್ಲಾಂಟೇಶನ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಪ್ಲಾಂಟೇಶನ್‌ ಧಗಧಗಿಸಿತು. ಆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸವನ್ನೇ ಪಡಬೇಕಾಯಿತು.

ಮಧ್ಯಾಹ್ನದ ಸುಡುಬಿಸಿಲನ್ನೂ ಲೆಕ್ಕಿಸದೆ ಕಾರ್ಯಾಚರಣೆ ನಡೆಸಿದರೂ ಮತ್ತೆ ಬೆಂಕಿ ಹತ್ತಿಕೊಳ್ಳುತ್ತಿತ್ತು! ಪಕ್ಕದಲ್ಲೇ ಪೆಟ್ರೋಲ್ ಬಂಕ್, ಬಸ್ಸಿನ ಗ್ಯಾರೇಜ್, ಲಾರಿ ಬಾಡಿ ಕಟ್ಟುವ ಗ್ಯಾರೇಜ್ ಇದ್ದು, ಜನರು ಭೀತಿಗೊಂಡಿದ್ದರು.

ಗಂಗೊಳ್ಳಿ ಠಾಣಾಧಿಕಾರಿ ನಂಜು ನಾಯ್ಕ್ ಹಾಗೂ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ, ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ಶಮನಗೊಳಿಸಲು ಅಗ್ನಿಶಾಮಕ ದಳಕ್ಕೆ ಸಹಕರಿಸಿದರು.

Edited By : Shivu K
Kshetra Samachara

Kshetra Samachara

03/01/2022 07:58 pm

Cinque Terre

15.96 K

Cinque Terre

0

ಸಂಬಂಧಿತ ಸುದ್ದಿ