ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆಯತಪ್ಪಿ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

ಮಲ್ಪೆ: ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ ಮೀನುಗಾರರೊಬ್ಬರು ಆಯತಪ್ಪಿ ಬೋಟ್ ನಿಂದ ಕಡಲಿಗೆ ಬಿದ್ದು ಮೃತಪಟ್ಟಿದ್ದಾರೆ. ಗೋಪಾಲ ಮೊಗೇರ(44) ಮೃತಪಟ್ಟವರು.

ಅವರು ಇತರ ಮೀನುಗಾರರೊಂದಿಗೆ ಪಡುತೋನ್ಸೆ ಗ್ರಾಮದ ರವೀಂದ್ರ ಶ್ರೀಯಾನ್ ಎಂಬವರ ಬೋಟ್ ನಲ್ಲಿ ಡಿ.29ರಂದು ರಾತ್ರಿ ಮೀನುಗಾರಿಕೆಗೆ ತೆರಳಿದ್ದು, ಡಿ.30ರ ನಸುಕಿನ ವೇಳೆ ಅರಬ್ಬಿ ಸಮುದ್ರದಲ್ಲಿ ಸುಮಾರು 12 ನಾಟಿಕಲ್ ಮೈಲ್ ದೂರದಲ್ಲಿ ಬಲೆ ಎಳೆಯುವಾಗ ಆಯ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಡಿ.31ರಂದು ಬೆಳಿಗ್ಗೆ ಗೋಪಾಲ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

01/01/2022 09:48 pm

Cinque Terre

7.89 K

Cinque Terre

1

ಸಂಬಂಧಿತ ಸುದ್ದಿ