ಪುತ್ತೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸದೆ ಅಮಾನವೀಯತೆ ಮೆರೆದ ಘಟನೆ ಪುತ್ತೂರಿನ ಕುಂಬ್ರದ ಕೊಲ್ಲಾಜೆಯಲ್ಲಿ ಇಂದು ನಡೆದಿದೆ.
ಬೈಕ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಕೂಟರ್ ಸವಾರ ಪ್ರಕಾಶ್ ಸರಿಯಾದ ಸಂದರ್ಭಕ್ಕೆ ಚಿಕಿತ್ಸೆ ದೊರಕದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲು ಆಟೋರಿಕ್ಷಾ ಚಾಲಕರಲ್ಲಿ ಸಾರ್ವಜನಿಕರು ವಿನಂತಿಸಿದ್ದರೂ ಯಾವೊಬ್ಬನೂ ಆಸ್ಪತ್ರೆಗೆ ಸಾಗಿಸಲು ಮುಂದಾಗಿರಲಿಲ್ಲ ಎನ್ನುವ ಆರೋಪವಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಅಪಘಾತ ಬಗ್ಗೆ ದೂರು ದಾಖಲಾಗಿದೆ.
Kshetra Samachara
20/12/2021 02:21 pm