ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸೆಂಟ್ರಲ್ ಮಾರುಕಟ್ಟೆ ಬಳಿ ಬೆಂಕಿ ಅವಘಡ; ತಡರಾತ್ರಿ 2 ಅಂಗಡಿಗಳು ಭಸ್ಮ

ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆ ಸಮೀಪದ ದುಬೈ ಮಾರ್ಕೆಟ್ ನಲ್ಲಿ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, 2 ಅಂಗಡಿಗಳು ಸಂಪೂರ್ಣ ಭಸ್ಮವಾಗಿದೆ.

ತಡರಾತ್ರಿ ನೆಲ ಮಹಡಿಯ ಫ್ಯಾನ್ಸಿ ಹಾಗೂ ಇಲೆಕ್ಟ್ರಿಕ್ ಅಂಗಡಿಗಳ ಒಳಗಿನಿಂದ ಹೊಗೆ ಏಳುವುದನ್ನು ಕಂಡು ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ಗಳು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ತಡರಾತ್ರಿ 3.20ರ ಸುಮಾರಿಗೆ ಸ್ಥಳಕ್ಕೆ ದೌಡಾಯಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ಆದರೆ, ಅಷ್ಟರಲ್ಲಾಗಲೇ ಎರಡು ಅಂಗಡಿಗಳು ಭಸ್ಮವಾಗಿದೆ.

ಶಾರ್ಟ್ ಸರ್ಕಿಟ್ ನಿಂದ ಈ ಅವಘಡ ಸಂಭವಿಸಿರಬಹುದೆಂದು‌ ಶಂಕಿಸಲಾಗಿದೆ. ಅಂಗಡಿಗಳ ಮಾಲೀಕರು ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟೇ ಮಾಹಿತಿ ದೊರಕಬೇಕಿದೆ.

Edited By :
Kshetra Samachara

Kshetra Samachara

19/12/2021 07:46 am

Cinque Terre

11.58 K

Cinque Terre

0

ಸಂಬಂಧಿತ ಸುದ್ದಿ