ಮುಲ್ಕಿ: ಕಿನ್ನಿಗೋಳಿ- ಕಟೀಲು ರಾಜ್ಯ ಹೆದ್ದಾರಿಯ ಮೂರುಕಾವೇರಿ ಮಾರಡ್ಕ ತಿರುವಿನಲ್ಲಿ ರಸ್ತೆಗೆ ವಾಹನವೊಂದರ ಆಯಿಲ್ ಚೆಲ್ಲಿದ್ದು, ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಈ ಸಂದರ್ಭ ಕೂಡಲೇ ಕಾರ್ಯಪ್ರವೃತ್ತರಾದ ಮೆನ್ನಬೆಟ್ಟು ಪಂಚಾಯತ್ ಮಾಜಿ ಸದಸ್ಯ ಸುನಿಲ್ ಸಿಕ್ವೇರಾ, ಸ್ಥಳೀಯರಾದ ಐವನ್ ಡಿಸೋಜ , ಪ್ರವೀಣ್ ಡಿಸೋಜ, ರೋಹಿತ್ ಕಟೀಲ್ ತಿಮ್ಮಪ್ಪ ಕಟೀಲ್, ಅಮಿತ್ ಮಿಸ್ಕಿತ್ ಮತ್ತಿತರರು ಸೇರಿ ಆಯಿಲ್ ಬಿದ್ದ ರಸ್ತೆಗೆ ಮರದ ಹುಡಿ ಹಾಕಿ ವಾಹನ ಸವಾರರು ಎಚ್ಚರ ವಹಿಸಿ ಚಲಿಸುವಂತೆ ಮಾಡಿದ್ದಾರೆ.
ಕಿನ್ನಿಗೋಳಿಯಿಂದ ಮೂರುಕಾವೇರಿ ಕಟೀಲು ರಸ್ತೆ ಅನೇಕ ತಿರುವುಗಳಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ರಸ್ತೆ ಅಗಲಗೊಂಡಿದ್ದರೂ ಕಟೀಲು ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಅತ್ಯಧಿಕವಾಗಿದ್ದು, ವಾಹನ ಸಂಚಾರ ದಟ್ಟಣೆಯಿಂದ ಕೂಡಿದೆ. ಕಡಿದಾದ ತಿರುವುಗಳನ್ನು ಮತ್ತಷ್ಟು ಅಗಲೀಕರಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
18/12/2021 10:05 pm