ಬೆಳ್ತಂಗಡಿ: ಹಳೆ ರಸ್ತೆ ವನ ಎಂಬಲ್ಲಿ ಇಬ್ಬರು ಗೆಳೆಯರು ಕಾಲೇಜಿಗೆ ಮಧ್ಯಾಹ್ನದ ವರೆಗೆ ರಜೆ ಇದ್ದ ಕಾರಣ ಸೋಮಾವತಿ ನದಿಯಲ್ಲಿ ಸ್ನಾನಕ್ಕಿಳಿದಿದ್ದು, ಈ ಸಂದರ್ಭ ಒಬ್ಬ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮೂಲತಃ ಚಿಕ್ಕಮಗಳೂರು ಮೂಲದ ಸಮರ್ಥ್(18) ಸಾವನ್ನಪ್ಪಿದ ಯುವಕ.
ಸಮರ್ಥ್, ಬೆಳ್ತಂಗಡಿ ಮೆಸ್ ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು ಇಂದು ಮಧ್ಯಾಹ್ನದ ನಂತರ ಗೆಳೆಯನ ಜೊತೆ ನದಿಗೆ ಸ್ನಾನ ಮಾಡಲು ತೆರಳಿದ್ದಾನೆ. ಗೆಳೆಯ ಪಕ್ಕದಲ್ಲಿಯೇ ಇದ್ದು ಸಮರ್ಥ್ ಮಾತ್ರ ನೀರಿಗಿಳಿದ್ದಾನೆ. ಈ ವೇಳೆ ಸಮರ್ಥ್ ಏಕಾಏಕಿ ನಾಪತ್ತೆಯಾದಾಗ ಗಾಬರಿಗೊಂಡ ಗೆಳೆಯ, ಬೊಬ್ಬೆ ಹಾಕಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳೀಯರು ನೀರಿಗಿಳಿದು, ಶವ ಮೇಲೆ ತೆಗೆದಿದ್ದು, ಬೆಳ್ತಂಗಡಿಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸುದ್ದಿ ತಿಳಿದ ಶ್ರೀ ಗುರುದೇವ ಕಾಲೇಜಿನ ಅಧ್ಯಕ್ಷ ಹಾಗೂ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಆಸ್ಪತ್ರೆಗೆ ಬಂದು, ಮುಂದಿನ ವ್ಯವಸ್ಥೆಗೆ ಸಹಕರಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/12/2021 03:44 pm