ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಎಸ್ಕೇಪ್

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಜಂಕ್ಷನ್ ಬಳಿ ನಿಲ್ಲಿಸಿದ್ದ ಎರಡು ರಿಕ್ಷಾ ಹಾಗೂ ಕಾರಿಗೆ ಲಾರಿ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.

ಈ ಸಂದರ್ಭ ಕೂಡಲೇ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ತೇಜ್ಪಾಲ್ ಮತ್ತಿತರರು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕನನ್ನು ಬೆನ್ನಟ್ಟಿದ್ದು ಎನ್ಐಟಿಕೆ ಬಳಿ ಹಿಡಿದು ಟ್ರಾಫಿಕ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಡಿಕ್ಕಿ ಹೊಡೆದ ಲಾರಿ ತುಮಕೂರು ಮೂಲದ್ದು ಎಂದು ತಿಳಿದುಬಂದಿದೆ.

ಬಳಿಕ ಟ್ರಾಫಿಕ್ ಪೊಲೀಸರು ಲಾರಿಯನ್ನು ಬೈಕಂಪಾಡಿಯ ಟ್ರಾಫಿಕ್ ಪೊಲೀಸ್ ಸ್ಟೇಷನ್ ಗೆ ಕೊಂಡೊಯ್ದು ಲಾರಿಯ ಪರವಾನಿಗೆ ಪರಿಶೀಲಿಸುತ್ತಿರುವಾಗ ಚಾಲಕ ಹೆದರಿ ಮತ್ತೆ ಪರಾರಿಯಾಗಿದ್ದಾನೆ. ಅಪಘಾತದಿಂದ ಮೂರು ವಾಹನಗಳಿಗೆ ಹಾನಿಯಾಗಿದ್ದು ಸುರತ್ಕಲ್ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

08/12/2021 02:40 pm

Cinque Terre

17 K

Cinque Terre

0

ಸಂಬಂಧಿತ ಸುದ್ದಿ