ಮುಲ್ಕಿ: ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆರೆಕಾಡು ಬಳಿ ಸ್ಕೂಟರ್ ಗಳ ನಡುವೆ ಅಪಘಾತ ಸಂಭವಿಸಿ ಬಾಲಕ ಸಹಿತ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಿನ್ನಿಗೋಳಿ ಸಮೀಪದ ಪದ್ಮನೂರು ನಿವಾಸಿ ಐಮಾನ್ (7), ಅಬ್ದುಲ್ ಕರೀಂ (50) ಹಾಗೂ ಗುತ್ತಕಾಡು ಕಲ್ಕರೆ ನಿವಾಸಿ ಮೆಲ್ಬಿನ್ (49) ಗಾಯಾಳುಗಳು.
ಮುಲ್ಕಿಯಿಂದ ಕಿನ್ನಿಗೋಳಿ ಸಮೀಪದ ಪದ್ಮನೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಕೆರೆಕಾಡು ಜಂಕ್ಷನ್ ಬಳಿ ಗುತ್ತಕಾಡು ಕಲ್ಕರೆ ಒಳ ರಸ್ತೆಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡೂ ಸ್ಕೂಟರ್ ಗಳು ಜಖಂಗೊಂಡಿದ್ದು, ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆರೆಕಾಡು ಜಂಕ್ಷನ್ ಬಳಿ ಗುತ್ತಕಾಡು, ಗೋಳಿಜೋರ, ಶಿಮಂತೂರು ಕಡೆಯಿಂದ ಬರುವ ವಾಹನಗಳು ಅತಿ ವೇಗ ದಲ್ಲಿ ಹೆದ್ದಾರಿ ಕಡೆಗೆ ಕ್ರಾಸ್ ಮಾಡುತ್ತಿದ್ದು, ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದೆ. ಅಪಘಾತ ನಿಯಂತ್ರಿಸಲು ಈ ಭಾಗದ ಒಳ ರಸ್ತೆಯಲ್ಲಿ ಹಂಪ್ಸ್ ಅಳವಡಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
22/11/2021 10:45 pm