ಮಲ್ಪೆ: ಮೀನುಗಾರಿಕೆ ಮುಗಿಸಿ ಬಂದರಿಗೆ ವಾಪಸಾಗುತ್ತಿದ್ದ ಬೋಟೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಭಾರತಿ ತಿಂಗಳಾಯ ಎಂಬವರಿಗೆ ಸೇರಿದ ಶ್ರೀ ನವಶಕ್ತಿ ಹೆಸರಿನ ಬೋಟು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ, ಮಲ್ಪೆ ಬಂದರಿನಿಂದ ಸ್ವಲ್ಪ ದೂರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಬಂಡೆಕಲ್ಲಿಗೆ ಬಡಿದಿದೆ. ಇದರಿಂದ ಬೋಟಿನ ಅಡಿಭಾಗ ಸಂಪೂರ್ಣ ಹಾನಿಗೊಂಡು, ನೀರು ಬೋಟಿನ ಒಳಹೊಕ್ಕು ಸಂಪೂರ್ಣ ಮುಳುಗುವ ಸ್ಥಿತಿಗೆ ತಲುಪಿತ್ತು. ತಕ್ಷಣ ಸಮೀಪದಲ್ಲಿದ್ದ ಬೇರೆ ಬೋಟ್ ನವರು ಮೀನುಗಾರರನ್ನು ರಕ್ಷಿಸಿ, ಬೋಟನ್ನು ಮಲ್ಪೆ ಬಂದರಿಗೆ ಎಳೆದು ತಂದಿದ್ದಾರೆ.
ಮೀನು, ಬಲೆ ಹಾಗೂ ಇನ್ನಿತರ ಸಲಕರಣೆ ಸಮುದ್ರ ಪಾಲಾಗಿದ್ದು, ಒಟ್ಟು 20 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/10/2021 10:49 am